Tunisha Sharma: ಶೀಜಾನ್​ ಖಾನ್​ ಜತೆಗಿನ ಲವ್​​ ಬಳಿಕ ಹಿಜಾಬ್​ ಧರಿಸುತ್ತಿದ್ದ ತುನಿಶಾ ಶರ್ಮಾ; ಬಾಯ್ಬಿಟ್ಟ ಸಂಬಂಧಿ

Tunisha Sharma Case | Sheezan Khan: ತುನಿಶಾ ಶರ್ಮಾ ಮಾತ್ರವಲ್ಲದೇ ಮತ್ತೋರ್ವ ಹುಡುಗಿಯ ಜೊತೆಗೂ ಶೀಜಾನ್​ ಖಾನ್​ ಸಂಪರ್ಕದಲ್ಲಿ ಇದ್ದರು. ಆಕೆಯ ಜೊತೆಗಿನ ವಾಟ್ಸಾಪ್​ ಸಂದೇಶವನ್ನು ಡಿಲೀಟ್​ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.

Tunisha Sharma: ಶೀಜಾನ್​ ಖಾನ್​ ಜತೆಗಿನ ಲವ್​​ ಬಳಿಕ ಹಿಜಾಬ್​ ಧರಿಸುತ್ತಿದ್ದ ತುನಿಶಾ ಶರ್ಮಾ; ಬಾಯ್ಬಿಟ್ಟ ಸಂಬಂಧಿ
ತುನಿಶಾ ಶರ್ಮಾ, ಶೀಜಾನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Dec 28, 2022 | 7:28 PM

ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಶಾ ಶರ್ಮಾ (Tunisha Sharma) ಅವರ ನಿಧನದಿಂದ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಸಖತ್​ ನೋವಾಗಿದೆ. ಮಂಗಳವಾರ (ಡಿ.27) ಅವರ ಅಂತ್ಯಕ್ರಿಯೆ ನಡೆಯಿತು. ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬ ಬಗ್ಗೆ ಈಗ ತನಿಖೆ ಜಾರಿಯಲ್ಲಿದೆ. ಮಾಜಿ ಬಾಯ್​ಫ್ರೆಂಡ್​ ಶೀಜಾನ್​ ಖಾನ್ (Sheezan Khan) ಅವರನ್ನು ಪೊಲೀಸರು ಬಂಧಿಸಿದ್ದು, ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ತುನಿಶಾ ಶರ್ಮಾ ಮತ್ತು ಶೀಜಾನ್​ ಖಾನ್​ ನಡುವೆ ಪ್ರೀತಿ ಚಿಗುರಿತ್ತು. ಆ ಬಳಿಕ ತುನಿಶಾ ಅವರು ಹಿಜಾಬ್​ (Hijab) ಧರಿಸಲು ಆರಂಭಿಸಿದ್ದರು ಎಂಬುದನ್ನು ಅವರ ಸಂಬಂಧಿಯೊಬ್ಬರು ಬಾಯ್ಬಿಟ್ಟಿದ್ದಾರೆ.

‘ಅಲಿಬಾಬಾ’ ಧಾರಾವಾಹಿಯಲ್ಲಿ ತುನಿಶಾ ಶರ್ಮಾ ಮತ್ತು ಶೀಜಾನ್​ ಖಾನ್​ ಅವರು ಒಟ್ಟಾಗಿ ನಟಿಸುತ್ತಿದ್ದರು. ಆ ಕಾರಣದಿಂದ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನಂತರ ಅದು ಪ್ರೀತಿಗೆ ತಿರುಗಿತ್ತು. ಬೇರೆ ಬೇರೆ ಧರ್ಮಕ್ಕೆ ಸೇರಿದ ಇವರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಈ ನಡುವೆ ಶೀಜಾನ್​ ಖಾನ್​ ಅವರಿಗೆ ಬೇರೆ ಹುಡುಗಿಯ ಜೊತೆಗೂ ಸಂಬಂಧ ಬೆಳೆದಿತ್ತು ಎನ್ನಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಶೀಜಾನ್​ ಖಾನ್​ ಮತ್ತು ತುನಿಶಾ ಶರ್ಮಾ ನಡುವೆ ಇತ್ತೀಚಿನ ದಿನಗಳಲ್ಲಿ ವೈಮನಸ್ಸು ಮೂಡಿತ್ತು. ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ 15 ದಿನಗಳ ಹಿಂದೆ ಬ್ರೇಕಪ್​ ಆಗಿತ್ತು. ಆ ಬಳಿಕ ತುನಿಶಾ ಶರ್ಮಾ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗುತ್ತಿದೆ. ಎಲ್ಲ ಆಯಾಮದಿಂದಲೂ ತನಿಖೆ ಮಾಡಲಾಗುತ್ತಿದೆ. ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳಲು ನಿಜಕ್ಕೂ ಕಾರಣ ಆಗಿದ್ದು ಏನು ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ
Image
Tunisha Sharma Funeral: ತುನಿಶಾ ಶರ್ಮಾ ಅಂತ್ಯಕ್ರಿಯೆ: ಅಗಲಿದ ನಟಿಗೆ ಅಂತಿಮ ನಮನ ಸಲ್ಲಿಸಿದ ಕಿರುತೆರೆ ಸೆಲೆಬ್ರಿಟಿಗಳು
Image
Tunisha Sharma: ಶ್ರದ್ಧಾ ವಾಕರ್​ ಕೊಲೆ ಕೇಸ್​ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್​ ಖಾನ್​ ನಡುವೆ ನಡೆದಿತ್ತು ಬ್ರೇಕಪ್​
Image
Tunisha Sharma: ಬ್ರೇಕಪ್​ ಆಗಿ 15 ದಿನಕ್ಕೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ; ಪ್ರಿಯಕರ ಶೀಜಾನ್​ ಖಾನ್​ ಬಂಧನ
Image
Tunisha Sharma’s Death: ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಲವ್​​ ಜಿಹಾದ್​​ ಕಾರಣವೇ ಎಂಬುದು ತನಿಖೆಯಾಗಬೇಕು: ಬಿಜೆಪಿ ಶಾಸಕ

ಇದನ್ನೂ ಓದಿ: Tunisha Sharma Funeral: ತುನಿಶಾ ಶರ್ಮಾ ಅಂತ್ಯಕ್ರಿಯೆ: ಅಗಲಿದ ನಟಿಗೆ ಅಂತಿಮ ನಮನ ಸಲ್ಲಿಸಿದ ಕಿರುತೆರೆ ಸೆಲೆಬ್ರಿಟಿಗಳು

ತುನಿಶಾ ಶರ್ಮಾ ಅಲ್ಲದೇ ಮತ್ತೋರ್ವ ಹುಡುಗಿಯ ಜೊತೆಗೂ ಶೀಜಾನ್​ ಖಾನ್​ ಸಂಪರ್ಕದಲ್ಲಿ ಇದ್ದರು. ಆಕೆಯ ಜೊತೆಗಿನ ವಾಟ್ಸಾಪ್​ ಸಂದೇಶವನ್ನು ಡಿಲೀಟ್​ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಡಿಲೀಟ್​ ಆದ ಮೆಸೇಜ್​ಗಳನ್ನು ಮರಳಿ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆ ಸೀಕ್ರೆಟ್​ ಗರ್ಲ್​ಫ್ರೆಂಡ್​ ಯಾರು ಎಂಬುದು ಗೊತ್ತಾದ ಬಳಿಕ ಅವರನ್ನು ಕೂಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: Tunisha Sharma: ಪಂಚಭೂತಗಳಲ್ಲಿ ಲೀನವಾದ ತುನಿಶಾ ಶರ್ಮಾ; ಇಲ್ಲಿದೆ ಅಂತ್ಯಕ್ರಿಯೆಯ ಫೋಟೋ ಗ್ಯಾಲರಿ..

ವಿಚಾರಣೆ ವೇಳೆ ಶೀಜಾನ್​ ಖಾನ್​ ಅವರು ತಮ್ಮ ಹೇಳಿಕೆಗಳನ್ನು ಬದಲಿಸುತ್ತಿದ್ದಾರೆ ಎಂದು ಕೂಡ ವರದಿ ಆಗಿದೆ. ತಮ್ಮಿಬ್ಬರ ಧರ್ಮ ಬೇರೆ ಬೇರೆ ಆಗಿದ್ದರಿಂದ ಬ್ರೇಕಪ್​ ಮಾಡಿಕೊಂಡೆವು ಎಂದು ಅವರು ಹೇಳಿದ್ದಾರೆ ಎನ್ನಲಾಗಿತ್ತು. ಈಗ ಇನ್ನೂ ಹಲವು ವಿವರಗಳು ಹೊರಬರುತ್ತಿವೆ. ಒಟ್ಟಿನಲ್ಲಿ ತುನಿಶಾ ಶರ್ಮಾ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬದವರು ಮತ್ತು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:27 pm, Wed, 28 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ