BBK 9: ರೂಪೇಶ್ ಶೆಟ್ಟಿ-ರಾಕೇಶ್ ಅಡಿಗಗೆ ಒಟಿಟಿ ಸೀಸನ್ ಸಹಕಾರಿ ಆಗಿದ್ದು ಹೇಗೆ? ಇಲ್ಲಿದೆ ಲೆಕ್ಕಾಚಾರ

Bigg Boss Kannada Season 9: ರೂಪೇಶ್ ಹಾಗೂ ರಾಕೇಶ್​ ಒಟಿಟಿ ಸೀಸನ್​ನಲ್ಲಿ ಟಾಪರ್ ಆಗಿ ಟಿವಿ ಸೀಸನ್​ಗೆ ಬಂದವರು. ಇಬ್ಬರಿಗೂ ಒಟಿಟಿ ಸೀಸನ್ ತುಂಬಾನೇ ಸಹಕಾರಿ ಆಗಿದೆ ಎಂಬಬಗ್ಗೆ ಅನುಮಾನವೇ ಬೇಡ. ಆ ಬಗ್ಗೆ ಇಲ್ಲಿದೆ ವಿವರ.

BBK 9: ರೂಪೇಶ್ ಶೆಟ್ಟಿ-ರಾಕೇಶ್ ಅಡಿಗಗೆ ಒಟಿಟಿ ಸೀಸನ್ ಸಹಕಾರಿ ಆಗಿದ್ದು ಹೇಗೆ? ಇಲ್ಲಿದೆ ಲೆಕ್ಕಾಚಾರ
ರಾಕೇಶ್​-ರೂಪೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 02, 2023 | 2:27 PM

ರೂಪೇಶ್ ಶೆಟ್ಟಿ (Roopesh Shetty) ‘ಬಿಗ್ ಬಾಸ್ ಕನ್ನಡಒಟಿಟಿ ಸೀಸನ್ 9ರ ವಿನ್ನರ್ ಆದರೆ, ರಾಕೇಶ್ ಅಡಿಗ (Rakesh Adiga) ರನ್ನರ್​​​ಅಪ್ ಆಗಿದ್ದಾರೆ. ಈ ಶೋನಿಂದ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. 145 ದಿನ ಬಿಗ್ ಬಾಸ್ ಮನೆಯಲ್ಲಿ ಕಳೆದ ಅವರು ಈಗ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಹಾಗೂ ರಾಕೇಶ್​ಗೆ ಅಭಿನಂದನೆಗಳು ಬರುತ್ತಿವೆ. ಇವರಿಬ್ಬರೂ ಒಟಿಟಿ ಸೀಸನ್​ನಲ್ಲಿ ಟಾಪರ್ ಆಗಿ ಟಿವಿ ಸೀಸನ್​ಗೆ ಬಂದವರು. ಇಬ್ಬರಿಗೂ ಒಟಿಟಿ ಸೀಸನ್ ತುಂಬಾನೇ ಸಹಕಾರಿ ಆಗಿದೆ ಎಂಬಬಗ್ಗೆ ಅನುಮಾನವೇ ಬೇಡ. ಆ ಬಗ್ಗೆ ಇಲ್ಲಿದೆ ವಿವರ.

ಒಟಿಟಿಯಲ್ಲಿ ರಿಹರ್ಸಲ್

ಯಾವುದೇ ಲೆಕ್ಕಾಚಾರ ಹಾಕಿಕೊಂಡು ಬಿಗ್ ಬಾಸ್ ಮನೆ ಒಳಗೆ ಹೋದರೂ ಅದು ವರ್ಕೌಟ್ ಆಗುವುದಿಲ್ಲ. ಇದು ಅನೇಕಬಾರಿ ಸಾಬೀತಾಗಿದೆ. ನಾವು ಅಂದುಕೊಳ್ಳುವುದು ಒಂದು ಅಲ್ಲಿ ಆಗುವುದೇ ಇನ್ನೊಂದು. ಈ ರೀತಿ ಲೆಕ್ಕಾಚಾರ ಹಾಕಿಕೊಂಡು ಮನೆ ಒಳಗೆ ಹೋಗಿ, ಕೆಲವೇ ವಾರಗಳಲ್ಲಿ ಎಲಿಮಿನೇಟ್ ಆಗಿ ಬಂದವರ ಸಂಖ್ಯೆ ದೊಡ್ಡದಿದೆ. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿಗೆ ‘ಬಿಗ್ ಬಾಸ್​ ಒಟಿಟಿ’ ಆಟ ರಿಹರ್ಸಲ್ ರೀತಿ ಇತ್ತು. ಆಟದ ವೈಖರಿ ಹೇಗೆ, ಒಳಗೆ ಯಾವ ರೀತಿಯ ರಾಜಕೀಯ ಇರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಒಟಿಟಿಯ 45 ದಿನ ಸಹಕಾರಿ ಆಗಿತ್ತು.

ಇದನ್ನೂ ಓದಿ
Image
Bigg Boss Kannada Finale: ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ ಆಗದಿರಲು ಕಲರ್ಸ್ ಕನ್ನಡದಿಂದ ಹೊಸ ಪ್ಲ್ಯಾನ್
Image
Divya Uruduga: ‘ಉತ್ತಮ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್​ ಪಟ್ಟ ದಿವ್ಯಾಗೆ ಸಿಕ್ಕಿಲ್ಲ; ಆದ್ರೂ ಫಿನಾಲೆಗೆ ಹೇಗೆ ಬಂದ್ರು?’: ಗುರೂಜಿ ಪ್ರಶ್ನೆ
Image
Divya Uruduga: ಬಿಗ್ ಬಾಸ್​ ಫಿನಾಲೆಯಿಂದ ಹೊರಬಿದ್ದ ದಿವ್ಯಾ ಉರುಡುಗಗೆ ಸಿಕ್ಕ ಹಣವೆಷ್ಟು?
Image
Divya Uruduga: ‘ಮನೆಯೊಳಗೆ ಇದ್ದಾಗ ನನ್ನ ಮಗಳು ಅಂತಾರೆ, ಆದರೆ ಹೊರಗೆ..’: ಗುರೂಜಿ ಮೇಲೆ ದಿವ್ಯಾ ಗರಂ

ಸಿಕ್ಕಿತು ಕಾನ್ಫಿಡೆನ್ಸ್

ಬಿಗ್ ಬಾಸ್ ಒಳಗೆ ಹೋದ ನಂತರ ಹೊರಗಿನ ಜಗತ್ತಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಮನೆ ಒಳಗೆ ತಾವು ಮಾಡುತ್ತಿರುವ ಪ್ಲ್ಯಾನ್​​ಗಳು ಸರಿ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸ್ಪರ್ಧಿಗಳಿಗೆ ಸಾಧ್ಯವಾಗುವುದಿಲ್ಲ. ರಾಕೇಶ್ ಹಾಗೂ ರೂಪೇಶ್​ಗೆ  ಒಟಿಟಿ ಸೀಸನ್ ಈ ನಿಟ್ಟಿನಲ್ಲಿ​ ಸಹಕಾರಿ ಆಗಿತ್ತು. ಟಾಪ್​ ನಾಲ್ಕರಲ್ಲಿ ಇವರಿಬ್ಬರು ಇದ್ದರು. ಇದರಿಂದ ತಾವು ಜನರಿಗೆ ಇಷ್ಟವಾಗುತ್ತಿದ್ದೇವೆ ಎಂಬುದು ರೂಪೇಶ್ ಹಾಗೂ ರಾಕೇಶ್​ಗೆ ಅರಿವಾಗಿತ್ತು. ಇದು ಇವರಿಬ್ಬರಿಗೆ ಹೊಸ ಕಾನ್ಫಿಡೆನ್ಸ್ ನೀಡಿತ್ತು.

ಹೋಗಿತ್ತು ಭಯ

ರೂಪೇಶ್ ಹಾಗೂ ರಾಕೇಶ್ ಅಡಿಗ ಫಿನಾಲೆ ಭಯವನ್ನು ಒಟಿಟಿ ಸೀಸನ್​ನಲ್ಲೇ ಕಳೆದುಕೊಂಡಿದ್ದರು. ಟಿವಿ ಸೀಸನ್ ಫಿನಾಲೆಯಲ್ಲಿದ್ದಾಗ ಅವರಲ್ಲಿ ಅಷ್ಟಾಗಿ ಭಯ ಕಾಣಲಿಲ್ಲ. ಇದನ್ನು ಸಾಮಾನ್ಯ ಎಂಬಂತೆ ಅವರು ಸ್ವೀಕರಿಸಿದ್ದರು.

ಹೆಚ್ಚಿತು ಫೇಮ್

ಒಟಿಟಿ ಸೀಸನ್ ಟಿವಿಯಲ್ಲಿ ಪ್ರಸಾರ ಕಂಡಿರಲಿಲ್ಲ. ಆದರೆ, ಒಟಿಟಿ ವ್ಯಾಪ್ತಿ ಹೆಚ್ಚಿದ್ದರಿಂದ ‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್​ನ ಅನೇಕರು ವೀಕ್ಷಣೆ ಮಾಡಿದ್ದರು. ಇದರಿಂದ ರಾಕೇಶ್ ಹಾಗೂ ರೂಪೇಶ್​ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇವರ ಹೆಸರಲ್ಲಿ ಅನೇಕ ಫ್ಯಾನ್​ಪೇಜ್​ಗಳು ಹುಟ್ಟಿಕೊಂಡವು. ಇದರಿಂದ ಇವರಿಬ್ಬರಿಗೆ ಹೆಚ್ಚಿನ ಪ್ರಮೋಷನ್ ಸಿಕ್ಕಿತು.

ತಿಳಿಯಿತು ವೀಕೆಂಡ್ ಎಪಿಸೋಡ್ ರೂಪುರೇಷೆ

ವೀಕೆಂಡ್ ಎಪಿಸೋಡ್​​ಗಳೆಂದರೆ ಎಲ್ಲರಿಗೂ ಒಂದು ಭಯ ಇರುತ್ತದೆ. ವಾರದ ದಿನಗಳಲ್ಲಿ ಮಾಡಿದ ತಪ್ಪನ್ನು ಎತ್ತಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಹೀಗಾಗಿ, ವೀಕೆಂಡ್ ಎಪಿಸೋಡ್​ನಲ್ಲಿ ಸುದೀಪ್ ಎದುರು ಮಾತನಾಡಲು ಸಾಕಷ್ಟು ಚಾಕಚಕ್ಯತೆ ಬೇಕು. ಈ ನಿಟ್ಟಿನಲ್ಲಿ ರೂಪೇಶ್ ಹಾಗೂ ರಾಕೇಶ್​ಗೆ ಒಟಿಟಿ ಸೀಸನ್​ ತುಂಬಾನೇ ಸಹಕಾರಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:54 pm, Mon, 2 January 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್