AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ದೀಪಿಕಾ ಪಡುಕೋಣೆಗೆ ಇಷ್ಟವಾಗುವ ಹೋಟೆಲ್​ಗಳಾವುವು? ತಂದೆ ಪ್ರಕಾಶ್ ಪಡುಕೋಣೆ ಹೇಳಿದ ಪಟ್ಟಿ

Deepika Padukone: ನಟಿ ದೀಪಿಕಾ ಪಡುಕೋಣೆಗೆ ಬೆಂಗಳೂರಿನಲ್ಲಿ ಇಷ್ಟವಾಗುವ ಜಾಗಗಳ್ಯಾವುವು, ಭೇಟಿ ನೀಡುವ ಹೋಟೆಲ್​ಗಳಾವುವು? ಎಂಬ ಬಗ್ಗೆ ತಂದೆ ಪ್ರಕಾಶ್ ಪಡುಕೋಣೆ ಮಾತನಾಡಿದ್ದಾರೆ.

ಬೆಂಗಳೂರಲ್ಲಿ ದೀಪಿಕಾ ಪಡುಕೋಣೆಗೆ ಇಷ್ಟವಾಗುವ ಹೋಟೆಲ್​ಗಳಾವುವು? ತಂದೆ ಪ್ರಕಾಶ್ ಪಡುಕೋಣೆ ಹೇಳಿದ ಪಟ್ಟಿ
ದೀಪಿಕಾ ಪಡುಕೋಣೆ
ಮಂಜುನಾಥ ಸಿ.
|

Updated on:Jun 24, 2023 | 8:48 PM

Share

ನಟಿ ದೀಪಿಕಾ ಪಡುಕೋಣೆ (Deepika Padukone) ಬೆಂಗಳೂರಿನವರೇ ಆದರು ಭವ್ಯವಾದ ವೃತ್ತಿ ಬದುಕು ಕಟ್ಟಿಕೊಂಡಿರುವುದು ಮುಂಬೈನಲ್ಲಿ. ಬಾಲಿವುಡ್​ನ ಸ್ಟಾರ್ ನಟಿಯಾಗಿರುವ ದೀಪಿಕಾ ಪಡುಕೋಣೆ, ಹಾಲಿವುಡ್ (Hollywood) ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು, ಕನ್ನಡ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ದೀಪಿಕಾ ಪಡುಕೋಣೆಗೆ ಬೆಂಗಳೂರಿನ ಮೇಲೆ ವಿಶೇಷ ಅಕ್ಕರೆ ಪ್ರೀತಿ. ಬಾಲ್ಯ, ಯೌವ್ವನವನ್ನು ಬೆಂಗಳೂರಿನಲ್ಲೇ ಕಳೆದ ದೀಪಿಕಾ ಪಡುಕೋಣೆಗೆ ಬೆಂಗಳೂರು ಬಹಳ ಪರಿಚಿತ. ಈಗ ಅಪರೂಕ್ಕೊಮ್ಮೆ ಬೆಂಗಳೂರಿಗೆ ಭೇಟಿ ನೀಡುವ ದೀಪಿಕಾ, ಇಲ್ಲಿಗೆ ಬಂದಾಗ ಭೇಟಿ ಕೊಡುವ ಸ್ಥಳಗಳಾವುವು? ಅವರ ತಂದೆ ಖ್ಯಾತ ಬ್ಯಾಡ್​ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ (Prakash Padukone) ಮಾತನಾಡಿದ್ದಾರೆ.

ಅಪ್ಪು ಹೆಸರಿನಲ್ಲಿ ಆಯೋಜಿಸಲಾಗಿರುವ ಬ್ಯಾಡ್​ಮಿಂಟನ್ ಚಾಂಪಿಯನ್​ಶಿಪ್​ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಕಾಶ್ ಪಡುಕೋಣೆ, ಟಿವಿ9 ಜೊತೆ ಮಾತನಾಡಿ, ”ದೀಪಿಕಾ ಪಡುಕೋಣೆಗೆ ದಕ್ಷಿಣ ಭಾರತದ ಊಟ ಅಚ್ಚು ಮೆಚ್ಚು. ಮನೆಗೆ ಬಂದಾಗ ಬರೀ ಅನ್ನ-ರಸಂ ಉಪ್ಪಿನಕಾಯಿಯಲ್ಲಿ ಊಟ ಮುಗಿಸುತ್ತಾರೆ. ಅದರ ಹೊರತಾಗಿ ನಾವು ವೀಣಾ ಸ್ಟೋರ್ಸ್​ಗೆ ಹೋಗುತ್ತೇವೆ. ಅಲ್ಲಿನ ಇಡ್ಲಿ ಅವರಿಗೆ ಬಹಳ ಇಷ್ಟ. ಸಿಟಿಆರ್ ದೋಸೆ ಸಹ ಅವರ ಫೇವರೇಟ್, ಅಲ್ಲಿಗೆ ಹೋಗುತ್ತೇವೆ, ಒಮ್ಮೊಮ್ಮೆ ಅಲ್ಲಿಂದ ಮನೆಗೆ ತರಿಸಿಕೊಳ್ಳುತ್ತೇವೆ. ಆಂಧ್ರ ಬಿರಿಯಾನಿ ಸಹ ಬಹಳ ಇಷ್ಟ. ಅದೆಲ್ಲ ಅವರಿಗೆ ಮುಂಬೈನಲ್ಲಿ ಸಿಗುವುದಿಲ್ಲ” ಎಂದಿದ್ದಾರೆ.

ಮನೆಗೆ ಬಂದಾಗ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ಪಡುಕೋಣೆ, ”ಅವರು ಅವರ ವೃತ್ತಿಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಬೆಂಗಳೂರಿಗೆ ಬರುವುದು ಅಪರೂಪ. ಮನೆಗೆ ಬಂದಾಗಲೂ ಸಹ ವೃತ್ತಿಯ ಬಗ್ಗೆ ಮಾತನಾಡುವುದಿಲ್ಲ. ನಾನು ಕ್ರೀಡಾಪಟು ಆಗಿದ್ದಾಗಲೂ ಸಹ ಕ್ರೀಡೆಯ ಬಗ್ಗೆ ಮನೆಯಲ್ಲಿ ಮಾತನಾಡುತ್ತಿರಲಿಲ್ಲ. ಹಾಗಾಗಿ ಅವರೂ ಸಹ ಈಗ ಅದನ್ನೇ ಪಾಲಿಸುತ್ತಿದ್ದಾರೆ. ತಮ್ಮ ಸಿನಿಮಾಗಳ ಬಗೆಗೂ ಸಹ ಅವರು ಹೆಚ್ಚು ಮಾತನಾಡುವುದಿಲ್ಲ. ನಾವೂ ಸಹ ಆ ಬಗ್ಗೆ ಕೇಳುವುದಿಲ್ಲ” ಎಂದಿದ್ದಾರೆ ಪ್ರಕಾಶ್ ಪಡುಕೋಣೆ.

ಇದನ್ನೂ ಓದಿ:Yeh Jawaani Hai Deewani: ಮಾಜಿ ಪ್ರಿಯಕರ ರಣಬೀರ್ ಕಪೂರ್​ನ ತಬ್ಬಿ ನಿಂತ ದೀಪಿಕಾ ಪಡುಕೋಣೆ; ಏನಿದು ಸಮಾಚಾರ?

ದೀಪಿಕಾ ಪಡುಕೋಣೆ ಈ ಹಿಂದಿನ ಹಲವು ಸಂದರ್ಶನಗಳಲ್ಲಿ ತಮ್ಮ ಬೆಂಗಳೂರು ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನಟಿಯಾಗಿರುವ ಜೊತೆಗೆ ಉದ್ಯಮಿಯೂ ಆಗಿರುವ ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್​ ಮೇಲೆ ಹೂಡಿಕೆ ಮಾಡಿದ್ದಾರೆ. ಇಲ್ಲಿ ಕೆಲವು ಅಪಾರ್ಟ್​ಮೆಂಟ್​ಗಳನ್ನು ಖರೀದಿಸಿದ್ದಾರೆ. ಜೊತೆಗೆ ಬೆಂಗಳೂರು ಕೇಂದ್ರಿತ ಕೆಲವು ಸ್ಟಾರ್ಟಪ್​ಗಳಲ್ಲಿಯೂ ದೀಪಿಕಾ ಬಂಡವಾಳ ಹೂಡಿದ್ದಾರೆ. ದೀಪಿಕಾ ಪಡುಕೋಣೆಯ ತಂದೆ ಪ್ರಕಾಶ್ ಪಡುಕೋಣೆ ಭಾರತದ ಅತ್ಯುತ್ತಮ ಬ್ಯಾಡ್​ಮಿಂಟನ್ ಆಟಗಾರರಾಗಿದ್ದವರು. ವಿಶ್ವ ಚಾಂಪಿಯನ್ ಸಹ ಆಗಿದ್ದರು. ದೀಪಿಕಾ ಪಡುಕೋಣೆ ತಮ್ಮ ಬಾಲ್ಯ ಹಾಗೂ ಯೌವ್ವನವನ್ನು ಬೆಂಗಳೂರಿನಲ್ಲಿಯೇ ಕಳೆದರು. ಇಲ್ಲಿಯೇ ಮಾಡೆಲಿಂಗ್ ಆರಂಭಿಸಿದ ದೀಪಿಕಾ ಪಡುಕೋಣೆ, ಮೊದಲು ನಟಿಸಿದ್ದು ಕನ್ನಡ ಸಿನಿಮಾ ಐಶ್ವರ್ಯಾನಲ್ಲಿ ನಟ ಉಪೇಂದ್ರ ಎದುರಾಗಿ. ದೀಪಿಕಾ ಪಡುಕೋಣೆ ಸಹ ಸ್ವತಃ ಬಹಳ ಒಳ್ಳೆಯ ಬ್ಯಾಡ್​ಮಿಂಟನ್ ಆಟಗಾರ್ತಿ. ರಾಷ್ಟ್ರಮಟ್ಟದಲ್ಲಿ ದೀಪಿಕಾ ಪಡುಕೋಣೆ ಆಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Sat, 24 June 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ