Yeh Jawaani Hai Deewani: ಮಾಜಿ ಪ್ರಿಯಕರ ರಣಬೀರ್ ಕಪೂರ್​ನ ತಬ್ಬಿ ನಿಂತ ದೀಪಿಕಾ ಪಡುಕೋಣೆ; ಏನಿದು ಸಮಾಚಾರ?

10 Years of Yeh Jawaani Hai Deewani: ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಕರನಿಗೋಸ್ಕರ ದೀಪಿಕಾ ಕತ್ತಿನ ಹಿಂಭಾಗದಲ್ಲಿ ಆರ್​ಕೆ ಎಂದು ಹಚ್ಚೆ ಕೂಡ ಹಾಕಿಸಿಕೊಂಡಿದ್ದರು. ಆದರೆ, ಇವರ ಸಂಬಂಧ 2009ರಲ್ಲಿ ಮುರಿದು ಬಿತ್ತು.

Yeh Jawaani Hai Deewani: ಮಾಜಿ ಪ್ರಿಯಕರ ರಣಬೀರ್ ಕಪೂರ್​ನ ತಬ್ಬಿ ನಿಂತ ದೀಪಿಕಾ ಪಡುಕೋಣೆ; ಏನಿದು ಸಮಾಚಾರ?
ಯೇ ಜವಾನಿ ಹೈ ದಿವಾನಿ ಚಿತ್ರತಂಡ
Follow us
ಮದನ್​ ಕುಮಾರ್​
|

Updated on: Jun 01, 2023 | 4:07 PM

ಬಾಲಿವುಡ್​ನಲ್ಲಿ ಬ್ರೇಕಪ್, ವಿಚ್ಛೇದನ ತುಂಬಾನೇ ಕಾಮನ್. ಇಬ್ಬರು ಬೇರೆ ಆದ ಬಳಿಕ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವುದಿಲ್ಲ ಅನ್ನೋದೆಲ್ಲ ಅಪರೂಪ. ಪರಸ್ಪರ ಪ್ರೀತಿಸುತ್ತಿದ್ದವರು, ಬ್ರೇಕಪ್ ಬಳಿಕ ಒಟ್ಟಾಗಿ ಸಿನಿಮಾ ಮಾಡಿದ ಸಾಕಷ್ಟು ಉದಾಹರಣೆ ಇದೆ. ಈಗ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ (Ranbir Kapoor) ಮತ್ತೆ ಒಂದಾಗಿದ್ದಾರೆ. ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಅವರನ್ನು ದೀಪಿಕಾ ಪಡುಕೋಣೆ ತಬ್ಬಿ ನಿಂತಿದ್ದಾರೆ. ಈ ಫೋಟೋಗಳನ್ನು ಸ್ವತಃ ದೀಪಿಕಾ ಪಡುಕೋಣೆ (Deepika Padukone) ಹಂಚಿಕೊಂಡಿದ್ದಾರೆ. ಅಂದಹಾಗೆ, ಇವರ ರೀಯೂನಿಯನ್​ಗೆ ಕಾರಣ ‘ಯೇ ಜವಾನಿ ಹೈ ದಿವಾನಿ’ ಸಿನಿಮಾಗೆ 10 ವರ್ಷ ತುಂಬಿರೋದು. ಅಭಿಮಾನಿಗಳು ಕೂಡ ಈ ಫೋಟೋವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ‘ಯೇ ಜವಾನಿ ಹೈ ದಿವಾನಿ’ (Yeh Jawaani Hai Deewani) ಸಿನಿಮಾದ ನೆನಪುಗಳನ್ನು ಫ್ಯಾನ್ಸ್ ಮೆಲುಕು ಹಾಕಲಾಗುತ್ತಿದೆ.

ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಕರನಿಗೋಸ್ಕರ ದೀಪಿಕಾ ಕತ್ತಿನ ಹಿಂಭಾಗದಲ್ಲಿ ಆರ್​ಕೆ ಎಂದು ಹಚ್ಚೆ ಕೂಡ ಹಾಕಿಸಿಕೊಂಡಿದ್ದರು. ಆದರೆ, ಇವರ ಸಂಬಂಧ 2009ರಲ್ಲಿ ಮುರಿದು ಬಿತ್ತು. ವಿಶೇಷ ಎಂದರೆ ಆ ಬಳಿಕವೂ ಇವರು ಒಟ್ಟಾಗಿ ಸಿನಿಮಾ ಮಾಡಿದ್ದರು. ಇವರು ಒಟ್ಟಾಗಿ ನಟಿಸಿದ ‘ಯೇ ಜವಾನಿ ಹೈ ದಿವಾನಿ’ ಸಿನಿಮಾ 2013ರ ಮೇ 31ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ 10 ವರ್ಷ ತುಂಬಿದ ಸಂಭ್ರಮಾಚಾರಣೆಗೆ ಎಲ್ಲರೂ ಒಂದೆಡೆ ಸೇರಿದ್ದರು.

ಇದನ್ನೂ ಓದಿ: ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಗೆ ಅವಮಾನ; ಸಿಟ್ಟಿಗೆದ್ದ ಫ್ಯಾನ್ಸ್

‘ಯೇ ಜವಾನಿ ಹೈ ದಿವಾನಿ’ ಸಿನಿಮಾದ ಕಲಾವಿದರಾದ ದೀಪಿಕಾ ಪಡುಕೋಣೆ, ಕಲ್ಕಿ ಕೇಕ್ಲಾ, ಆದಿತ್ಯ ರಾಯ್ ಕಪೂರ್, ನಿರ್ದೇಶಕ ಅಯಾನ್ ಮುಖರ್ಜಿ, ನಿರ್ಮಾಪಕ ಕರಣ್ ಜೋಹರ್ ಮೊದಲಾದವರು ಒಂದೆಡೆ ಸೇರಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಾಗಿದೆ.

ಇದನ್ನೂ ಓದಿ: ‘ಪ್ರಾಜೆಕ್ಟ್​ ಕೆ’ ಚಿತ್ರಕ್ಕೆ ಭರ್ಜರಿ ಸಂಭಾವನೆ ಪಡೆದ ದೀಪಿಕಾ ಪಡುಕೋಣೆ; ಸ್ಟಾರ್​ ಹೀರೋಗಿಂತ ಹೆಚ್ಚು ರೆಮ್ಯುನರೇಷನ್

ರಣಬೀರ್-ದೀಪಿಕಾ ಪಡುಕೋಣೆ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಬಾರಿ ಮುಖಾಮುಖಿ ಆಗುವ ಸಂದರ್ಭ ಬರುತ್ತದೆ. ಈ ಕಾರಣಕ್ಕೆ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಇಬ್ಬರೂ ಹಳೆಯ ಘಟನೆಗಳನ್ನು ಮರೆತು ಮುಂದೆ ಬಂದಿದ್ದಾರೆ. ಹೀಗಾಗಿ, ರೀಯೂನಿಯನ್ ಸಂದರ್ಭದಲ್ಲಿ ಒಂದೆಡೆ ಸೇರಿದ್ದಾರೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಯೇ ಜವಾನಿ ಹೈ ದಿವಾನಿ’ ಸಿನಿಮಾ ಈಗಲೂ ಅನೇಕರ ಫೇವರಿಟ್ ಚಿತ್ರ ಎನಿಸಿಕೊಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ