ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಮತ್ತೇ ಧಾರಾಕಾರ ಮಳೆ, ವಾರದಲ್ಲಿ ನಾಲ್ಕನೇ ಬಾರಿ ಸುರಿದ ಮಳೆರಾಯ!

|

Updated on: May 15, 2024 | 7:21 PM

ಮುಂದಿನ ಒಂದು ವಾರ ಕಾಲ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ವಾರದಿಂದ ಮಳೆಯಾಗುತ್ತಿದೆ ಮತ್ತು ಇಲಾಖೆಯ ಮುನ್ಸೂಚನೆ ಪ್ರಕಾರ ಈ ವಾರವೆಲ್ಲ ಮಳೆಯಾಗಲಿದೆ. ಅದೇನೇ ಇರಲಿ, ಬದಲಾದ ವಾತಾವರಣ ಮತ್ತು ಹವಾಮಾನದಿಂದ ಜಿಲ್ಲೆಯ ಜನ ಖುಷಿಪಡುತ್ತಿದ್ದಾರೆ.

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು (Chikmagalur) ಜಿಲ್ಲೆಯಲ್ಲಿ ಮಳೆಗಾಲ ಶುರುವಾಗಿದೆ ಅಂತ ನಾವು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಕಳೆದೊಂದು ವಾರದ ಅವಧಿಯಲ್ಲಿ ಇದು ನಾಲ್ಕನೇ ಮಳೆ. ಟಿವಿ9 ಚಿಕ್ಕಮಗಳೂರು ವರದಿಗಾರ ನೀಡುರುವ ಮಾಹಿತಿ ಪ್ರಕಾರ ಚಿಕ್ಕಮಗಳೂರು ನಗರ ಮತ್ತು ತಾಲ್ಲೂಕು, ಮೂಡಿಗೆರೆ (Mudigere) ಹಾಗೂ ಕಳಸ (Kalasa) ತಾಲ್ಲೂಕುಗಳಲ್ಲಿ ಇಂದು ಸಾಯಂಕಾಲ ಧಾರಾಕಾವಾಗಿ ಮಳೆಯಾಗಿದೆ. ಮಳೆಯ ಜೊತೆ ಬಿರುಗಾಳಿಯ ಹಾಗೆ ಗಾಳಿ ಬೀಸಿದ ಕಾರಣ ಕಳಸ-ಕೊಟ್ಟಿಗೆಹಾರ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದ ಮರವನ್ನು ಸ್ಥಳೀಯರೇ ತೆರವುಗೊಳಿಸಿದರು. ಮುಂದಿನ ಒಂದು ವಾರ ಕಾಲ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ವಾರದಿಂದ ಮಳೆಯಾಗುತ್ತಿದೆ ಮತ್ತು ಇಲಾಖೆಯ ಮುನ್ಸೂಚನೆ ಪ್ರಕಾರ ಈ ವಾರವೆಲ್ಲ ಮಳೆಯಾಗಲಿದೆ. ಅದೇನೇ ಇರಲಿ, ಬದಲಾದ ವಾತಾವರಣ ಮತ್ತು ಹವಾಮಾನದಿಂದ ಜಿಲ್ಲೆಯ ಜನ ಖುಷಿಪಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Chikkamagaluru Rains: ಚಿಕ್ಕಮಗಳೂರಿನಲ್ಲಿ ವರುಣಾರ್ಭಟ, ಭೀತಿ ಸೃಷ್ಟಿಸಿದ ಗಾಳಿ ಮಳೆ

Follow us on