Congress Protest: ಅನ್ನಭಾಗ್ಯ ಸ್ಕೀಮ್​ಗೆ ಕೇಂದ್ರದಿಂದ ಅಕ್ಕಿ ನಿರಾಕರಣೆ ವಿರೋಧಿಸಿ ಕಾಂಗ್ರೆಸ್ ಅಯೋಜಿಸಿದ್ದ ಪ್ರತಿಭಟನೆಗೆ ಮಳೆ ಅಡ್ಡಿ

Congress Protest: ಅನ್ನಭಾಗ್ಯ ಸ್ಕೀಮ್​ಗೆ ಕೇಂದ್ರದಿಂದ ಅಕ್ಕಿ ನಿರಾಕರಣೆ ವಿರೋಧಿಸಿ ಕಾಂಗ್ರೆಸ್ ಅಯೋಜಿಸಿದ್ದ ಪ್ರತಿಭಟನೆಗೆ ಮಳೆ ಅಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 20, 2023 | 12:46 PM

ಪಾರ್ಕ್ ನೆಲ್ಲೆಡೆ ನೀರು ಜಮಾಯಿಸಿರುವುದರಿಂದ ಪ್ರತಿಭಟನೆ ತಡವಾಗಿ ಆರಂಭವಾಗುವುದೆಂದು ಹೇಳಲಾಗಿದೆ.

ಬೆಂಗಳೂರು: ಅನ್ನಬಾಗ್ಯ ಯೋಜನೆ (Anna Bhagya Scheme) ಜಾರಿ ಮಾಡಲು ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿರುವುದನ್ನು ವಿರೋಧಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು (Congress Workers) ಇಂದು ಆಯೋಜಿಸಿದ್ದ ದೊಡ್ಡಮಟ್ಟದ ಪ್ರತಿಭಟನೆ ಮಳೆ ಅಡ್ಡಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ರಾಜ್ಯ ಸಚಿವ ಸಂಪುಟದ ಸಚಿವರು, ಮತ್ತು ಪಕ್ಷದ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾರ್ಕ್ ನೆಲ್ಲೆಡೆ ನೀರು ಜಮಾಯಿಸಿರುವುದರಿಂದ ಪ್ರತಿಭಟನೆ ತಡವಾಗಿ ಆರಂಭವಾಗುವುದೆಂದು ಹೇಳಲಾಗಿದೆ. ಪ್ರತಿಭಟನೆ ನಡೆಸುವುದ ಮಾತ್ರ ನಿಶ್ಚಿತ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ