ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ

ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 16, 2023 | 1:14 PM

ರಾಜ್ಯ ಸರ್ಕಾರದ ಬೇಡಿಕೆಯಾಗಿರುವ 2.88 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡಲು ಕೇಂದ್ರ ಹಿಂತೆಗೆಯುತ್ತಿದೆ, ತಮ್ಮ ಸರ್ಕಾರವೇನೂ ಉಚಿತವಾಗಿ ನೀಡಿ ಅಂತ ಹೇಳಿಲ್ಲ ಎಂದು ಶಿವಕುಮಾರ್ ಹೇಳಿದರು

ಬೆಂಗಳೂರು: ಅನ್ನಬಾಗ್ಯ ಯೋಜನೆ ಬೇಗ ಜಾರಿಗೊಳಿಸದಿದ್ದರೆ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದರೆ, ಅಕ್ಕಿ ನೀಡಲು ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಸತ್ಯಾಗ್ರಹ ನಡೆಸುವುದಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಶಿವಕುಮಾರ್, ಕೇಂದ್ರ ಆಹಾರ ನಿಗಮದ (Food Corporation of India) ಬಳಿ 7ಲಕ್ಷ ಮೆಟ್ರಿಕ್ ಟನ್ ಗಳಷ್ಟು ಅಕ್ಕಿ ದಾಸ್ತಾನು ಇದ್ದು ರಾಜ್ಯ ಸರ್ಕಾರದ ಬೇಡಿಕೆಯಾಗಿರುವ 2.88 ಲಕ್ಷ ಮೆಟ್ರಿಕ್ ಟನ್ (metric tonne) ಅಕ್ಕಿ ನೀಡಲು ಹಿಂತೆಗೆಯುತ್ತಿದೆ, ತಮ್ಮ ಸರ್ಕಾರವೇನೂ ಉಚಿತವಾಗಿ ನೀಡಿ ಅಂತ ಹೇಳಿಲ್ಲ ಎಂದರು. ಕೇಂದ್ರ ಸರ್ಕಾರದ ಈ ಬಡವರ ವಿರೋಧಿ ಧೋರಣೆಯನ್ನು ಜನತೆಯ ಗಮನಕ್ಕೆ ತರಲು ಮಂಗಳವಾರದಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಯಾವ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಲ್ಲ ಎಂದು ಅವರು ಒತ್ತಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ