Abhi Aviva Beegara Oota: ಮಂಡ್ಯದಿಂದ ಅಭಿಷೇಕ್-ಅವಿವಾ ಬೀಗರ ಔತಣಕೂಟದ ನೇರ ಪ್ರಸಾರ
ಸುಮಾರು 15 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿರುವ ಬೀಗರ ಊಟಕ್ಕೆ ಸುಮಾರು 50,000 ಜನ ಆಗಮಿಸಲಿದ್ದು ವಿವಿಧ ಮಾಂಸಾಹಾರಿ ಭಕ್ಷ್ಯಗಳು ಅವರಿಗಾಗಿ ಕಾಯುತ್ತಿವೆ.
ಮಂಡ್ಯ: ಅಭಿಷೇಕ್ ಮತ್ತು ಅವಿವಾ (Abhishek-Aviva) ಮೊನ್ನೆ ವಿವಾಹ ಬಂಧನದಲ್ಲಿ ಬೆಸೆದ ಪ್ರಯಕ್ತ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಇಂದು ನಗರದ ಹೊರವಲಯದಲ್ಲಿರುವ ಗೆಜ್ಜಲೆಗೆರೆಯಲ್ಲಿ ಭಾರೀ ಪ್ರಮಾಣದ ಬೀಗರ ಔತಣವನ್ನು (feast) ಏರ್ಪಡಿಸಿದ್ದಾರೆ. ಸುಮಾರು 15 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿರುವ ಬೀಗರ ಊಟಕ್ಕೆ ಸುಮಾರು 50,000 ಜನ ಆಗಮಿಸಲಿದ್ದು ವಿವಿಧ ಮಾಂಸಾಹಾರಿ ಭಕ್ಷ್ಯಗಳು ಅವರಿಗಾಗಿ ಕಾಯುತ್ತಿವೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ರೆಬೆಲ್ ಸ್ಟಾರ್ ಅಂಬರೀಷ್ ಅವರ ಇಷ್ಟದ ಮಾಂಸಾಹಾರಿ ಖಾದ್ಯಗಳನ್ನು ಔತಣಕ್ಕೆ ಸಿದ್ಧಪಡಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 16, 2023 11:40 AM
Latest Videos