ರೇಡ್ ನಡೆದ ಫಾರ್ಮ್ಹೌಸ್ಗೆ ಕನ್ನಡದ ನಟ ‘ರಾಜಾಹುಲಿ’ ಹರ್ಷ ಎಂಟ್ರಿ; ಕಾರಣವೇನು?
ಬೆಂಗಳೂರಿನಲ್ಲಿ ರೇವ್ ಪಾರ್ಟಿ ನಡೆದಿದೆ. ಇದರ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಹಲವರನ್ನು ಬಂಧಿಸಲಾಗಿದೆ. ಇದರಲ್ಲಿ ಟಾಲಿವುಡ್ನ ನಟಿಯರೂ ಕೂಡ ಇದ್ದಾರೆ. ಅವರಿಗೂ ಈ ಪಾರ್ಟಿಗೂ ಏನು ಸಂಬಂಧ ಎನ್ನುವ ಕುತೂಹಲ ಮೂಡೋದು ಸಹಜ. ಇದಕ್ಕೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಜಿಆರ್ ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ (Rave Party) ನಡೆದಿದೆ. ಇದರ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಹಲವರನ್ನು ಬಂಧಿಸಲಾಗಿದೆ. ಇದರಲ್ಲಿ ಟಾಲಿವುಡ್ನ ನಟಿಯರೂ ಕೂಡ ಇದ್ದಾರೆ. ಇದು ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿದೆ. ಈ ಮಧ್ಯೆ ಪಾರ್ಟಿ ನಡೆದ ಫಾರ್ಮ್ಹೌಸ್ಗೆ ಕನ್ನಡದ ನಟ ‘ರಾಜಾಹುಲಿ’ ಹರ್ಷ ಅವರ ಆಗಮನ ಆಗಿದೆ. ಅವರಿಗೂ ಈ ಪಾರ್ಟಿಗೂ ಏನು ಸಂಬಂಧ ಎನ್ನುವ ಕುತೂಹಲ ಮೂಡೋದು ಸಹಜ. ಇದಕ್ಕೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ‘ಅಧಿಕಾರಿಗಳೊಬ್ಬರನ್ನು ಭೇಟಿ ಮಾಡೋಕೆ ನಾನು ಇಲ್ಲಿಗೆ ಬಂದಿದ್ದೇನೆ’ ಎಂದಿದ್ದಾರೆ ಹರ್ಷ. ಈ ಮೂಲಕ ಈ ಪ್ರಕರಣಕ್ಕೂ ಅವರಿಗೂ ಏನೂ ಸಂಬಂಧ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.