Video: ಬಸ್ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್
ನಿವೃತ್ತ ಐಎಎಸ್ ಅಧಿಕಾರಿಗೆ ಬಸ್ ಕಂಡಕ್ಟರ್ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಜೈಪುರದಲ್ಲಿ ನಡೆದಿದೆ. ಡಿಯೋ ವೈರಲ್ ಆದ ನಂತರ ನಿವೃತ್ತ ಐಎಎಸ್ ಅಧಿಕಾರಿ ಕನೋಟಾ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ವೀಡಿಯೊ ವೈರಲ್ ಆದ ನಂತರ, ರಸ್ತೆ ಇಲಾಖೆಯು ಕ್ರಮ ಕೈಗೊಂಡಿತು ಮತ್ತು ತಕ್ಷಣವೇ ಕಂಡಕ್ಟರ್ ಅನ್ನು ಅಮಾನತುಗೊಳಿಸಿತು.

ಘಟನೆ ಏನು?
ಕನೋಟಾದ ನೈಲಾ ರಸ್ತೆಯ ನಿವಾಸಿ 75 ವರ್ಷದ ನಿವೃತ್ತ ಐಎಎಸ್ ಅಧಿಕಾರಿ ಆರ್ ಎಲ್ ಮೀನಾ ಅವರು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜೈಪುರದಿಂದ ನೈಲಾಗೆ ಬಸ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಕಾನೋಟ ಬಸ್ ನಿಲ್ದಾಣದವರೆಗೆ ಟಿಕೆಟ್ ತೆಗೆದುಕೊಂಡಿದ್ದರು. ಪ್ರಯಾಣ ದರದ ಬಗ್ಗೆ ಇಬ್ಬರಲ್ಲಿ ವಾಗ್ವಾದ ಆರಂಭವಾಗಿತ್ತು, ಅವರು ಇಳಿಯಬೇಕಾದ ಬಸ್ ನಿಲ್ದಾಣ ತಲುಪಿದರೂ ನಿಲ್ಲಿಸಲಿಲ್ಲ.
ಬಳಿಕ ಕಂಡಕ್ಟರ್ ಮೀನಾ ಅವರನ್ನು ತಳ್ಳಿದಾಗ ಮೀನಾ ಅವರು ಕಂಡಕ್ಟರ್ಗೆ ಕಪಾಳಮೋಕ್ಷ ಮಾಡುತ್ತಾರೆ. ಇದಾದ ಬಳಿಕ ಕಂಡಕ್ಟರ್ ಕೋಪಗೊಂಡು ಮೀನಾರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಜೈಪುರ ಸಿಟಿ ಟ್ರಾನ್ಸ್‌ಪೋರ್ಟ್ ಸರ್ವಿಸಸ್ ಲಿಮಿಟೆಡ್ ಆರೋಪಿ ಕಂಡಕ್ಟರ್ ಘನಶ್ಯಾಮ್ ಶರ್ಮಾ ಅವರನ್ನು ಅಮಾನತು ಮಾಡಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ