AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರ

ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರ

ಪೃಥ್ವಿಶಂಕರ
|

Updated on: Feb 12, 2026 | 4:46 PM

Share

Mohammed Nadeem Breaks Jayasuriya's Record: ಶ್ರೀಲಂಕಾ ತಂಡ ಓಮನ್ ವಿರುದ್ಧ 105 ರನ್‌ಗಳ ಬೃಹತ್ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿತು. ದಸುನ್ ಶನಕ 19 ಎಸೆತಗಳಲ್ಲಿ ಅತಿ ವೇಗದ ಟಿ20 ಅರ್ಧಶತಕ ಬಾರಿಸಿದರು. ಸೋತರೂ, ಓಮನ್‌ನ ಮೊಹಮ್ಮದ್ ನದೀಮ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಹಿರಿಯ ಆಟಗಾರರಾಗಿ (43 ವರ್ಷ) ಸನತ್ ಜಯಸೂರ್ಯ ಅವರ 17 ವರ್ಷಗಳ ದಾಖಲೆಯನ್ನು ಮುರಿದು ಗಮನ ಸೆಳೆದರು.

ಓಮನ್ ತಂಡವನ್ನು 105 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಶ್ರೀಲಂಕಾ ತಂಡ ಅತಿ ದೊಡ್ಡ ಗೆಲುವಿನ ದಾಖಲೆಯನ್ನು ಬರೆದಿದೆ. ಇದರ ಜೊತೆಗೆ 19 ಎಸೆತಗಳಲ್ಲಿ ಅರ್ಧಶತಕದ ಬಾರಿಸಿದ ದಸುನು ಶನಕ ಕೂಡ ಲಂಕಾ ಪರ ಅತಿ ವೇಗದ ಟಿ20 ಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಇದು ಲಂಕಾ ತಂಡದ ಕಥೆಯಾದರೆ, ಈ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಓಮನ್ ತಂಡದ ಮೊಹಮ್ಮದ್ ನದೀಮ್ ಕೂಡ ದಾಖಲೆಯೊಂದನ್ನು ನಿರ್ಮಿಸಿದರು. ಓಮನ್ ಪರ ಅರ್ಧಶತಕ ಬಾರಿಸಿ ಏಕಾಂಗಿ ಹೋರಾಟ ನೀಡಿದ ಮೊಹಮ್ಮದ್ ನದೀಮ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾ ಎನಿಸಿಕೊಂಡಿದ್ದಾರೆ. ಈ ಮೂಲಕ 17 ವರ್ಷಗಳ ಹಿಂದೆ ಅರ್ಧಶತಕ ಸಿಡಿಸಿದ್ದ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿದಿದ್ದಾರೆ.

2009 ರ ಟಿ20 ವಿಶ್ವಕಪ್‌ನಲ್ಲಿ ಸನತ್ ಜಯಸೂರ್ಯ ವೆಸ್ಟ್ ಇಂಡೀಸ್ ವಿರುದ್ಧ ಅರ್ಧಶತಕ ಬಾರಿಸಿದ್ದರು. ಆಗ ಅವರ ವಯಸ್ಸು 39 ವರ್ಷ 345 ದಿನಗಳು. ಈಗ, ಈ ದಾಖಲೆ 43 ವರ್ಷ 161 ದಿನದಲ್ಲಿ ಅರ್ಧಶತಕ ಬಾರಿಸಿರುವ ಮೊಹಮ್ಮದ್ ನದೀಮ್ ಅವರದ್ದಾಗಿದೆ. ಈ ಟಿ20 ವಿಶ್ವಕಪ್‌ನಲ್ಲಿ ನದೀಮ್ ಅತ್ಯಂತ ಹಿರಿಯ ಕ್ರಿಕೆಟಿಗ ಕೂಡ. ಮೊಹಮ್ಮದ್ ನದೀಮ್ ಓಮನ್ ಪರ 70 ಪಂದ್ಯಗಳನ್ನಾಡಿದ್ದು, 20.7 ಸರಾಸರಿಯಲ್ಲಿ 768 ರನ್ ಬಾರಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿರುವ ನದೀಮ್ 40 ವಿಕೆಟ್‌ ಕೂಡ ಉರಿಳಿಸಿದ್ದಾರೆ.