AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆ ಕಾಲದಲ್ಲಿ ಗ್ರಾಹಕರ ಸೆಳೆಯಲು ಎಂಟ್ರಿ ಕೊಟ್ಟಿವೆ ರಾಜಸ್ಥಾನ ಮಡಿಕೆಗಳು

ಸಾಧು ಶ್ರೀನಾಥ್​
|

Updated on: Mar 19, 2021 | 2:38 PM

ಬೇಸಿಗೆ ಕಾಲದಲ್ಲಿ ಗ್ರಾಹಕರನ್ನ ಸೆಳೆಯುವುದ್ದಕ್ಕೆ ಆ ಜಿಲ್ಲೆಗೆ ರಾಜಸ್ಥಾನ ಮಡಿಕೆಗಳು ಎಂಟ್ರಿ ಕೊಟ್ಟಿವೆ. Rajasthan pitcher pot made for summer thirst ಮಣ್ಣಿನ ಮಡಕೆ ಅಂದ್ರೆ ಗ್ರಾಮೀಣ ಭಾಗದಲ್ಲಿ ನೈಸರ್ಗಿಕ ಫ್ರಿಜ್ ಅಂತಾನೇ ಹೆಸರು ವಾಸಿ. ಫೈವ್‌ ಸ್ಟಾರ್ ರೇಟಿಂಗ್ ಫ್ರೀಜ್ ನೀಡಿದ ತಣ್ಣನೆಯ ಮತ್ತು ಆರೋಗ್ಯಕರ ನೀರನ್ನು ಈ ಮಣ್ಣಿನ ಮಡಿಕೆಗಳು ನೀಡುತ್ತವೆ. ಇಷ್ಟು ದಿನ ಬರೀ ಒಂದೆ ಆಕಾರದಲ್ಲಿ ದೊರೆಯುತ್ತಿದ್ದ ಮಡಿಕೆಗಳು ಈಗ ಫುಲ್ ಮಾರ್ಡನ್ ಆಗಿವೆ. ಬೇಸಿಗೆ ಕಾಲದಲ್ಲಿ ಗ್ರಾಹಕರನ್ನ ಸೆಳೆಯುವುದ್ದಕ್ಕೆ […]

ಬೇಸಿಗೆ ಕಾಲದಲ್ಲಿ ಗ್ರಾಹಕರನ್ನ ಸೆಳೆಯುವುದ್ದಕ್ಕೆ ಆ ಜಿಲ್ಲೆಗೆ ರಾಜಸ್ಥಾನ ಮಡಿಕೆಗಳು ಎಂಟ್ರಿ ಕೊಟ್ಟಿವೆ. Rajasthan pitcher pot made for summer thirst

ಮಣ್ಣಿನ ಮಡಕೆ ಅಂದ್ರೆ ಗ್ರಾಮೀಣ ಭಾಗದಲ್ಲಿ ನೈಸರ್ಗಿಕ ಫ್ರಿಜ್ ಅಂತಾನೇ ಹೆಸರು ವಾಸಿ. ಫೈವ್‌ ಸ್ಟಾರ್ ರೇಟಿಂಗ್ ಫ್ರೀಜ್ ನೀಡಿದ ತಣ್ಣನೆಯ ಮತ್ತು ಆರೋಗ್ಯಕರ ನೀರನ್ನು ಈ ಮಣ್ಣಿನ ಮಡಿಕೆಗಳು ನೀಡುತ್ತವೆ. ಇಷ್ಟು ದಿನ ಬರೀ ಒಂದೆ ಆಕಾರದಲ್ಲಿ ದೊರೆಯುತ್ತಿದ್ದ ಮಡಿಕೆಗಳು ಈಗ ಫುಲ್ ಮಾರ್ಡನ್ ಆಗಿವೆ. ಬೇಸಿಗೆ ಕಾಲದಲ್ಲಿ ಗ್ರಾಹಕರನ್ನ ಸೆಳೆಯುವುದ್ದಕ್ಕೆ ಆ ಜಿಲ್ಲೆಗೆ ರಾಜಸ್ಥಾನ ಮಡಿಕೆಗಳು ಎಂಟ್ರಿ ಕೊಟ್ಟಿವೆ.

ಬಣ್ಣದ, ಬಣ್ಣದ ಚಿತ್ತಾರದಲ್ಲಿ ಕಂಗೊಳಿಸುತ್ತಿರುವ ಮಾರ್ಡನ್ ಮಡಕೆಗಳು.. ಗ್ರಾಹಕರನ್ನ ಸೆಳೆಯುವುದ್ದಕ್ಕೆ ರಾಜಸ್ಥಾನಿ ಮಡಕೆಗಳು ಎಂಟ್ರಿ.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದಲ್ಲಿ.. ಹೌದು ಬೇಸಿಗೆ ಆರಂಭವಾದ್ರೆ ಸಾಕು ಜನ ನೀರಿನ ದಾಹ ತೀರಿಸಿಕೊಳ್ಳಲು ಕೋಲ್ಡ್ ವಾಟರ್ ಮೊರೆ ಹೋಗುತ್ತಾರೆ.

ಬಹುತೇಕರ ಮನೆಯಲ್ಲಿ ಪ್ರೀಡ್ಜ್ ನೋಡಲು ಸಿಗುತ್ತೆ. ಆದ್ರೆ ಬಡವರು ಮತ್ತು ಮದ್ಯಮ ವರ್ಗದ ಜನರಿಗೆ ಪ್ರೀಡ್ಜ್ ಕೊಂಡುಕೊಳ್ಳಲು ಆಗಲ್ಲ. ಹೀಗಾಗಿ ಬಡವರ ಪ್ರೀಡ್ಜ್ ಎಂದೆ ಕರೆಸಿಕೊಳ್ಳುವ ಕುಂಬಾರರು ತಯಾರಿಸಿರುವ ಮಡಕೆಯನ್ನ ಖರೀದಿಸುತ್ತಾರೆ. .