AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ, ಹೊತ್ತಿಕೊಂಡ ಬೆಂಕಿ, ಮೂವರು ಸಜೀವದಹನ , ಐವರ ಸ್ಥಿತಿ ಗಂಭೀರ

ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ, ಹೊತ್ತಿಕೊಂಡ ಬೆಂಕಿ, ಮೂವರು ಸಜೀವದಹನ , ಐವರ ಸ್ಥಿತಿ ಗಂಭೀರ

ನಯನಾ ರಾಜೀವ್
|

Updated on: Apr 24, 2026 | 9:14 AM

Share

ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ ಸಂಭವಿಸಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವದಹನವಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ಹಮೀರ್ವಾಸ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪಿಲಾನಿ-ಸಾದುಲ್‌ಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮದುವೆಯಲ್ಲಿ ಭಾಗವಹಿಸಿ ಪಿಲಾನಿಯಿಂದ ಹಿಂದಿರುಗುತ್ತಿದ್ದ ಮಹೀಂದ್ರಾ ಬೊಲೆರೊ ತ್ರಿಪಾಲಿ ಟೋಲ್ ಪ್ಲಾಜಾ ಬಳಿ ಡಂಪರ್ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಎರಡೂ ವಾಹನಗಳಿಗೂ ಕ್ಷಣದಲ್ಲಿ ಬೆಂಕಿ ತಗುಲಿತ್ತು. ಗಾಯಗೊಂಡ ಐದು ಜನರನ್ನು ನಂತರ ಪಿಲಾನಿಯ ಬಿರ್ಲಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಈಗ ಅವರನ್ನು ಉತ್ತಮ ಚಿಕಿತ್ಸೆಗಾಗಿ ಜೈಪುರದ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಗಿದೆ.

ಚುರು, ಏಪ್ರಿಲ್ 24: ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ ಸಂಭವಿಸಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವದಹನವಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ಹಮೀರ್ವಾಸ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪಿಲಾನಿ-ಸಾದುಲ್‌ಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮದುವೆಯಲ್ಲಿ ಭಾಗವಹಿಸಿ ಪಿಲಾನಿಯಿಂದ ಹಿಂದಿರುಗುತ್ತಿದ್ದ ಮಹೀಂದ್ರಾ ಬೊಲೆರೊ ತ್ರಿಪಾಲಿ ಟೋಲ್ ಪ್ಲಾಜಾ ಬಳಿ ಡಂಪರ್ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಎರಡೂ ವಾಹನಗಳಿಗೂ ಕ್ಷಣದಲ್ಲಿ ಬೆಂಕಿ ತಗುಲಿತ್ತು. ಗಾಯಗೊಂಡ ಐದು ಜನರನ್ನು ನಂತರ ಪಿಲಾನಿಯ ಬಿರ್ಲಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಈಗ ಅವರನ್ನು ಉತ್ತಮ ಚಿಕಿತ್ಸೆಗಾಗಿ ಜೈಪುರದ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us