ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಈ ವಾರ ಬಿಗ್ ಬಾಸ್ ಮನೆಯಲ್ಲಿ ರೆಸಾರ್ಟ್ ಶೈಲಿಯ ಟಾಸ್ಕ್ ನೀಡಲಾಗಿದೆ. ಮೊದಲು ರಜತ್ ಅವರು ರೆಸಾರ್ಟ್ ಸಿಬ್ಬಂದಿಗಳ ತಂಡದಲ್ಲಿ ಇದ್ದರು. ಆದರೆ ಈಗ ಆಟ ಬದಲಾಗಿದೆ. ಅವರ ತಂಡಕ್ಕೆ ಈಗ ಅತಿಥಿಗಳ ಪಟ್ಟ ಸಿಕ್ಕಿದೆ. ಹಾಗಾಗಿ ರಜತ್ ಸಿಕ್ಕಾಪಟ್ಟೆ ಎಗರಾಟ ಶುರು ಮಾಡಿಕೊಂಡಿದ್ದಾರೆ. ಅವರ ಆರ್ಭಟ ನೋಡಿ ಇನ್ನುಳಿದವರಿಗೆ ತಲೆ ನೋವು ಶುರುವಾಗಿದೆ.
ರಜತ್ ಅವರು ಸಿಕ್ಕಾಪಟ್ಟೆ ಕಿರಿಕ್ ಪಾರ್ಟಿ ಎಂಬುದು ಎಲ್ಲರಿಗೂ ಗೊತ್ತು. ಈಗ ಅವರ ಕಿರಿಕ್ ಜಾಸ್ತಿ ಆಗಿದೆ. ಯಾಕೆಂದರೆ. ಬಿಗ್ ಬಾಸ್ ನೀಡಿರುವ ಟಾಸ್ಕ್ ಆ ರೀತಿ ಇದೆ. ‘ನಮ್ಮ ಸರದಿ ಬಂದಾಗ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತೇನೆ’ ಎಂದು ಅವರು ಈ ಮೊದಲೇ ಹೇಳಿದ್ದರು. ಈಗ ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಡಿಸೆಂಬರ್ 25ರ ಸಂಚಿಕೆಯ ಪ್ರೋಮೋ ಇಲ್ಲಿದೆ. ವೈಲ್ಡ್ ಕಾರ್ಡ್ ಮೂಲಕ ಬಂದಿರುವ ರಜತ್ ಅವರು ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಹೆಚ್ಚು ಅಬ್ಬರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

