ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?

Updated on: Dec 13, 2024 | 3:20 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಹಾಗೂ ಧನರಾಜ್ ಮಧ್ಯೆ ಸಾಕಷ್ಟು ಕಿರಿಕ್ ಆಗಿದೆ. ಈ ಕಿರಿಕ್ ವಾರಾಂತ್ಯಕ್ಕೂ ಮುಂದುವರಿದಿದೆ. ಈ ವೇಳೆ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದೆ. ಅವರು ಧನರಾಜ್​ಗೆ ಹೊಡೆದು ಹೊರ ಹೋದರೇ ಎಂಬ ಪ್ರಶ್ನೆ ಮೂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಅವರು ಆಟದ ವೇಳೆ ಅಗ್ರೆಸ್ ಆಗಿ ನಡೆದುಕೊಳ್ಳುತ್ತಾರೆ. ಇದರಿಂದ ಸಾಕಷ್ಟು ಬಾರಿ ಕಿರಿಕ್ ಆಗಿದ್ದು ಇದೆ. ಈಗ ಧನರಾಜ್ ಹಾಗೂ ರಜತ್ ಮಧ್ಯೆ ಕಿರಿಕ್ ಆಗಿದೆ. ಇದು ಬೇರೆಯದೇ ಹಂತಕ್ಕೆ ಹೋಗಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ‘ನಿನ್ನ ಮೂತಿ ಒಡೆದೇ ಹೊರಕ್ಕೆ ಹೋಗೋದು’ ಎಂದು ರಜತ್ ಅವಾಜ್ ಹಾಕಿದ್ದಾರೆ. ಅವರು ಧನರಾಜ್ ಕೈ ಮಾಡಲು ಕೂಡ ಹೋಗಿದ್ದಾರೆ. ಅವರು ಧನರಾಜ್​ಗೆ ಹೊಡೆದು ಹೊರ ಹೋದರೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 13, 2024 07:48 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More