ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಅಣ್ಣ-ತಂಗಿ ರೀತಿ ಇದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿದ್ದರು. ಈ ಆಟದಲ್ಲಿ ಇಬ್ಬರ ನಡುವೆ ಕಿರಿಕ್ ಆಯಿತು. ರಜತ್ ಕುಟುಂಬದ ಬಗ್ಗೆ ಚೈತ್ರಾ ಮಾತಾಡಿದರು. ಇದರಿಂದ ರಜತ್ ಗರಂ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ (Chaithra Kundapura) ಅವರು ಸ್ಪರ್ಧಿಸಿದ್ದರು. ಮೊದಲಿಗೆ ಜಗಳ ಮಾಡಿಕೊಂಡಿದ್ದ ಅವರು ನಂತರ ಆಪ್ತರಾದರು. ಚೈತ್ರಾ ಮದುವೆಯನ್ನು ರಜತ್ ಮುಂದೆ ನಿಂತು ಮಾಡಿಸಿದ್ದರು. ಅಣ್ಣ-ತಂಗಿ ರೀತಿ ಇದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದಿದ್ದರು. ಈ ಆಟದಲ್ಲಿ ಇಬ್ಬರ ನಡುವೆ ಕಿರಿಕ್ ಆಯಿತು. ರಜತ್ ಕುಟುಂಬದ ಬಗ್ಗೆ ಚೈತ್ರಾ ಮಾತಾಡಿದರು. ಇದರಿಂದ ರಜತ್ (Rajath Kishan) ಗರಂ ಆಗಿದ್ದಾರೆ. ‘ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಚೈತ್ರಾ ಬಗ್ಗೆ ಮಾತಾಡಲು ನನಗೆ ಇಷ್ಟ ಇಲ್ಲ. ನಾವೆಲ್ಲ ಏನು ಮಾಡಿದ್ದೇವೆ ಎಂಬುದು ಅವರಿಗೆ ಗೊತ್ತಿರಬೇಕು. ಅವರು ನನ್ನ ಫ್ಯಾಮಿಲಿ ಬಗ್ಗೆ ಮಾತನಾಡಿದ್ದರಿಂದ ಅವರ ಬಗ್ಗೆ ನನಗೆ ಏನೂ ಕೇಳಬೇಡಿ, ನಾನು ಅವರ ಬಗ್ಗೆ ಮಾತನಾಡುವುದೂ ಇಲ್ಲ. ನನಗೆ ಅವರು ಯಾರು ಅಂತಲೇ ಗೊತ್ತಿಲ್ಲ. ನಾನು ಅವರನ್ನು ನನ್ನ ಫ್ಯಾಮಿಲಿ ಎಂದುಕೊಂಡಿದ್ದೆ. ಆದರೆ ಅವರು ನನ್ನ ಫ್ಯಾಮಿಲಿ ಬಗ್ಗೆ ಮಾತಾಡಿದ್ದು ನನಗೆ ಇಷ್ಟ ಆಗಲಿಲ್ಲ’ ಎಂದು ರಜತ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
