ಅಕ್ರಮ ವಾಸಿಗಳಿಗೆ ತೋರಿದ ಕರುಣೆ, ಈ ಸಾಧಕರಿಗೆ ಯಾಕಿಲ್ಲ? ಪ್ಯಾರಾ-ಅಥ್ಲೀಟ್ ಪ್ರಸಾದ್ಗೆ ವಸತಿ ಭಾಗ್ಯ ನೀಡದ ಸರ್ಕಾರ
ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರು, ವಿಕಲಚೇತನ ಕುಟುಂಬದೊಂದಿಗೆ ಐದು ವರ್ಷಗಳಿಂದ ಮನೆಗಾಗಿ ಪರದಾಡುತ್ತಿದ್ದಾರೆ. ಆದರೆ, ಅತಿಕ್ರಮಣದಾರರಿಗೆ 30 ದಿನಗಳಲ್ಲಿ ಮನೆ ಮಂಜೂರಾಗಿದ್ದು, ಅರ್ಹರಿಗೆ ಅನ್ಯಾಯವಾಗುತ್ತಿದೆ.
ಬೆಂಗಳೂರು, ಜ.9: ಕೋಗಿಲು ಅಕ್ರಮ ವಾಸಿಗಳು ರಾಜ್ಯ ಸರ್ಕಾರ ವಸತಿ ಭಾಗ್ಯವನ್ನು ನೀಡಲು ಮುಂದಾಗಿದೆ. ಆದರೆ ನಿಜವಾಗಿಯು ಸರ್ಕಾರದಿಂದ ಈ ವಸತಿ ಭಾಗ್ಯ ಸಿಗಬೇಕಾಗಿರುವುದು ಇವರಿಗೆ. ಇದು ಟಿವಿ9 ಕನ್ನಡ ಮಾಡಿದ ವಿಶೇಷ ವರದಿ. ಸಾಧಕರಿಗೆ ಸಿಗಬೇಕಾದ ಸೌಲಭ್ಯ ಅಕ್ರಮವಾಗಿ ಬಂದವರಿಗೆ ಸಿಗುತ್ತಿದೆ ಎಂಬುದನ್ನು ಜನರ ಅಕ್ರೋಶವಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರು, ವಿಕಲಚೇತನ ಕುಟುಂಬದೊಂದಿಗೆ ಐದು ವರ್ಷಗಳಿಂದ ಮನೆಗಾಗಿ ಪರದಾಡುತ್ತಿದ್ದಾರೆ. ಆದರೆ, ಕೋಗಿಲು ಅಕ್ರಮ ವಾಸಿಗಳಿಗೆ 30 ದಿನಗಳಲ್ಲಿ ಮನೆ ಮಂಜೂರಾಗಿದ್ದು, ಅರ್ಹರಿಗೆ ಅನ್ಯಾಯವಾಗುತ್ತಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ. ಕೋಗಿಲು ಪ್ರದೇಶದ 26 ಅತಿಕ್ರಮಣದಾರರಿಗೆ 30 ದಿನಗಳೊಳಗೆ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ವಸತಿ ಮತ್ತು ಕಂದಾಯ ಸಚಿವರು ದೃಢಪಡಿಸಿದ್ದಾರೆ. ಸರ್ಕಾರವು ಮಾನವೀಯತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಆದರೆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರಿಗೆ ಕಳೆದ ಐದು ವರ್ಷಗಳಿಂದ ಮನೆ ಮಂಜೂರಾಗಿಲ್ಲ. ಪ್ರಸಾದ್ ಅವರ ಕುಟುಂಬದಲ್ಲಿ ತಂದೆ ರಾಮು (70) ಮತ್ತು ತಾಯಿ (65) ಸೇರಿದಂತೆ ಎಲ್ಲರೂ ವಿಕಲಚೇತನರಾಗಿದ್ದಾರೆ. 2001ರಲ್ಲಿ ಮನೆಗಾಗಿ 1 ಲಕ್ಷ ರೂಪಾಯಿ ಪಾವತಿಸಿದ್ದರೂ, ಪ್ರಸಾದ್ ಮತ್ತು ಅವರ ಕುಟುಂಬ ಕಾದು ಕುಳಿತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಾದ್ ಅವರ ಸಾಧನೆಯನ್ನು ಮೆಚ್ಚಿದ್ದರೂ, ವಸತಿ ಸೌಲಭ್ಯ ಒದಗಿಸುವಲ್ಲಿ ವಿಳಂಬವಾಗಿದೆ. ಅರ್ಹರಿಗೆ ಸೂರು ನೀಡುವಲ್ಲಿ ಸರ್ಕಾರವು ತನ್ನ ಕರ್ತವ್ಯವನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದೀಗ ಪ್ಯಾರಾಒಲಂಪಿಕ್ ಕ್ರೀಡಾಪಟು ಪ್ರಸಾದ್ಗೆ ಮನೆ ನೀಡುವ ಭರವಸೆಯನ್ನು ರಾಜೀವ್ ಗಾಂಧಿ ವಸತಿ ನಿಗಮ ಅಧ್ಯಕ್ಷ ಪರಶುರಾಮ್ ಅವರು ಟಿವಿ9ಗೆ ಹೇಳಿದೆ. ನಮ್ಮ ಇಲಾಖೆಯಿಂದ ಮನೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ನಮ್ಮಿಂದ ತಪ್ಪಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ. ಕೂಡಲೇ ನಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಇಂದೇ ಕ್ರೀಡಾಪಟು ಪ್ರಸಾದ್ ನಮ್ಮ ಕಚೇರಿ ಬಂದು ಭೇಟಿ ನೀಡಲಿ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
