ರಾಜ್ಕುಮಾರ್ 97ನೇ ಜನ್ಮದಿನ; ಆಚರಣೆಯಲ್ಲಿ ಸಿಎಂ, ಡಿಸಿಎಂ ಕೂಡ ಭಾಗಿ
ರಾಜ್ಕುಮಾರ್ ಅವರಿಗೆ ಇಂದು ಜನ್ಮದಿನ. ಅವರನ್ನು ಅಭಿಮಾನಿಗಳು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ವಿಶೇಷ ದಿನದಂದು ಅಭಿಮಾನಿಗಳು ಒಳ್ಳೆಯ ಕೆಲಸ ಮಾಡುವುದರಲ್ಲಿ ತೊಡಗಿದ್ದಾರೆ. ಈ ಮಧ್ಯೆ 97ನೇ ಜಯಂತಿ ಆಚರಿಸಲು ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆಗಳು ನಡೆದಿದೆ. ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಭಾಗಿ ಆಗುವ ಸಾಧ್ಯತೆ ಇದೆ.
ಇಂದು (ಏಪ್ರಿಲ್ 24) ವರನಟ ಡಾ.ರಾಜ್ ಕುಮಾರ್ ಅವರಿಗೆ 97ನೇ ವರ್ಷದ ಜನ್ಮದಿನ. 97ನೇ ಜಯಂತಿ ಆಚರಿಸಲು ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆಗಳು ನಡೆದಿದೆ. ಹೂವಿನ ಅಲಂಕಾರದಿಂದ ಸಮಾಧಿ ಸಿದ್ಧವಾಗಿದೆ. ಇಂದು ರಾಜ್ ಕುಟುಂಬದಿಂದ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಅವರ 97ನೇ ವರ್ಷದ ಜನ್ಮದಿನ ಆಚರಣೆ ಮಾಡಲಾಗುತ್ತದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಶೋಭಾ ಕರಂದ್ಲಾಜೆ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

