‘ಬಿಗ್ ಬಾಸ್’ ಮನೆಯಲ್ಲಿ ಸೋನು ಗೌಡ ಅವರನ್ನು ಅನುಕರಿಸಿದ ರಾಕೇಶ್ ಅಡಿಗ

Edited By:

Updated on: Aug 16, 2022 | 6:30 AM

ಮೊದಲ ಸುತ್ತಿನಲ್ಲಿ ರಾಕೇಶ್ ಅಡಿಗ ಅವರು ಗೆದ್ದರು. ಮನೆಯ ಒಂದು ಸ್ಪರ್ಧಿಯನ್ನು ರಾಕೇಶ್ ಅನುಕರಿಸಬೇಕಿತ್ತು. ಅವರು ಸೋನು ಗೌಡ ಅವರ ಮಿಮಿಕ್ರಿ ಮಾಡಿದ್ದಾರೆ.

‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) 14 ಸ್ಪರ್ಧಿಗಳು ಇದ್ದಾರೆ. ಇವರ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಪ್ರತಿ ದಿನ ಸ್ಪರ್ಧಿಗಳಿಗೆ ಬೇರೆಬೇರೆ ರೀತಿಯ ಟಾಸ್ಕ್​ ನೀಡಲಾಗುತ್ತಿದೆ. ಅದೇ ರೀತಿ ಸೋಮವಾರ (ಆಗಸ್ಟ್ 15) ಒಂದು ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ಗೆದ್ದ ಸ್ಪರ್ಧಿಗಳಿಗೆ ನಾನಾ ರೀತಿಯ ಚಟುವಟಿಕೆ ನೀಡಲಾಯಿತು. ಮೊದಲ ಸುತ್ತಿನಲ್ಲಿ ರಾಕೇಶ್ ಅಡಿಗ (Rakesh Adiga) ಅವರು ಗೆದ್ದರು. ಮನೆಯ ಒಂದು ಸ್ಪರ್ಧಿಯನ್ನು ರಾಕೇಶ್ ಅನುಕರಿಸಬೇಕಿತ್ತು. ಅವರು ಸೋನು ಗೌಡ ಅವರ ಮಿಮಿಕ್ರಿ ಮಾಡಿದ್ದಾರೆ.