‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬುಲೆಟ್ ನಿಜ ಮುಖ ರಿವೀಲ್ ಮಾಡಿದ ರಮೋಲಾ

Updated on: Jun 16, 2025 | 11:38 AM

ರಕ್ಷಕ್ ಬುಲೆಟ್ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರು ಬಿಗ್ ಬಾಸ್ ಬಳಿಕ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಏರಿದರು. ಈ ವೇಳೆ ಅವರ ವಿವಿಧ ರೀತಿಯ ಮನಸ್ಥಿತಿ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ರಚಿತಾ ರಾಮ್ ಕೂಡ ಅಚ್ಚರಿಗೊಂಡಿದ್ದಾರೆ.

ರಕ್ಷಕ್ ಬುಲೆಟ್ (Rakshak Bullet) ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಏರಿದಾಗ ಸಾಕಷ್ಟು ಖಡಕ್ ಆಗಿ ನಡೆದುಕೊಳ್ಳುತ್ತಿದ್ದರು. ಈ ಬಗ್ಗೆ ರಚಿತಾ ರಾಮ್ ಅನೇಕ ಬಾರಿ ಪ್ರಶ್ನೆ ಮಾಡಿದ್ದಾರಂತೆ. ಆದರೆ, ದಿನ ಕಳೆದಂತೆ ರಕ್ಷಕ್ ಬದಲಾಗಿದ್ದಾರೆ. ಈಗ ಅವರು ಸಖತ್ ಸಾಫ್ಟ್ ಆಗಿದ್ದಾರೆ. ಮಾತು ಕಡಿಮೆ. ಹೀಗಾಗಿ, ರಚಿತಾಗೆ ಒಂದು ಅನುಮಾನ ಬಂದಿದೆ. ‘ನೀನು ಯಾಕೆ ಸಾಫ್ಟ್ ಆಗಿ ಮಾತನಾಡಲ್ಲ ಎಂದು ನಾನೇ ಕೇಳುತ್ತಿದ್ದೆ. ಈಗ ಸಾಫ್ಟ್ ಆಗಿ ಮಾತನಾಡಬೇಡ ಎನ್ನುತ್ತಿದ್ದೇನೆ. ಹಳೆಯದು ನಾಟಕವಾ ಅಥವಾ ಇದು ನಾಟಕವಾ’ ಎಂದು ರಚಿತಾ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರಕ್ಷಕ್ ಸಹ ಸ್ಪರ್ಧಿ ರಮೋಲಾ, ‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ ನಡೆದುಕೊಳ್ಳುತ್ತಾನೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More