ನೆಮ್ಮದಿ ಹುಡುಕಿ ಕೊರಗಜ್ಜನ ಆದಿಸ್ಥಳಕ್ಕೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್
ಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿರುವ ರಕ್ಷಿತಾ ಪ್ರೇಮ್ ಅವರು, ‘ಇಲ್ಲಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದಿದ್ದಾರೆ. ಈ ಮೊದಲು ಕೂಡ ಅವರು ಇಲ್ಲಿಗೆ ಭೇಟಿ ನೀಡಿದ್ದರು. ರಕ್ಷಿತಾ ಪ್ರೇಮ್ ಅವರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ.
ಮಂಗಳೂರಿನ ಕೊರಗಜ್ಜ ಆದಿಸ್ಥಳಕ್ಕೆ ಚಿತ್ರರಂಗದ ಅನೇಕರು ಭೇಟಿ ನೀಡುತ್ತಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಭಾನುವಾರ (ಸೆಪ್ಟೆಂಬರ್ 4) ಇಲ್ಲಿಗೆ ತೆರಳಿದ್ದಾರೆ. ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಂಡಾರ ಬೈಲಿನ ಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನಕ್ಕೂ ಅವರು ಭೇಟಿ ಕೊಟ್ಟಿದ್ದಾರೆ. ಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿರುವ ರಕ್ಷಿತಾ ಪ್ರೇಮ್ ಅವರು, ‘ಇಲ್ಲಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದಿದ್ದಾರೆ. ಈ ಮೊದಲು ಕೂಡ ಅವರು ಇಲ್ಲಿಗೆ ಭೇಟಿ ನೀಡಿದ್ದರು. ರಕ್ಷಿತಾ ಪ್ರೇಮ್ (Rakshita Prem) ಅವರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ