ಬಿಗ್ ಬಾಸ್ ಮನೆಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ; ‘ಶೆಟ್ಟಿ ಡಾನ್’ ಕುಟುಂಬದಲ್ಲಿ ಹರ್ಷ
ಬಿಗ್ ಬಾಸ್ ಕನ್ನಡ ಮನೆಯೊಳಗೆ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಶೆಟ್ಟಿ ಡಾನ್ ಕುಟುಂಬದ ವಿಶೇಷ ಟಾಸ್ಕ್ ವೇಳೆ ಮನೆಗೆ ಆಗಮಿಸಿದ ಅವರಿಗೆ ಸ್ಪರ್ಧಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಹೊಸ ಟ್ವಿಸ್ಟ್ ಬಿಗ್ ಬಾಸ್ ಮನೆಯಲ್ಲಿ ಯಾವ ಮಟ್ಟದ ಕುತೂಹಲ ಹೆಚ್ಚಿಸಲಿದೆ ಎಂಬುದನ್ನು ವೀಕ್ಷಕರು ಕಾದು ನೋಡಬೇಕಿದೆ.
ಬಿಗ್ ಬಾಸ್ ಮನೆಯೊಳಗೆ ಹೊಸ ಸಂಚಲನ ಸೃಷ್ಟಿಯಾಗಿದೆ. ಬಿಗ್ ಬಾಸ್ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳಲ್ಲಿ ಹೊಸ ಉತ್ಸಾಹ ಮೂಡಿದೆ. ಮನೆಗೆ ಬಂದ ರಕ್ಷಿತಾ ಅವರನ್ನು ಇತರೆ ಸ್ಪರ್ಧಿಗಳು ಅಕ್ಕರೆಯಿಂದ ಸ್ವಾಗತಿಸಿದ್ದಾರೆ. ಪ್ರಶಾಂತ್, ಸೌಂದರ್ಯಾ ಸೇರಿದಂತೆ ಎಲ್ಲರೂ ರಕ್ಷಿತಾ ಅವರ ಆಗಮನದಿಂದ ತುಂಬಾನೇ ಖುಷಿಪಟ್ಟಿದ್ದಾರೆ. ಅವರು ಯಾವ ರೀತಿಯಲ್ಲಿ ಮನರಂಜನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

