ಅರೆಸ್ಟಾಗಿರುವ ಪೊಲೀಸಪ್ಪ ರಾಮಚಂದ್ರಪ್ಪನ ಕಾಮಲೀಲೆಗಳು ಒಬ್ಬ ಮಹಿಳೆಯೊಂದಿಗೆ ಕೊನೆಗೊಳ್ಳುವುದಿಲ್ಲ!

ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2025 | 3:36 PM

ಕಾಮುಕ ರಾಮಚಂದ್ರಪ್ಪ ಖಾಕಿಯ ದರ್ಪದಲ್ಲಿ ಮಹಿಳೆಯರನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿರುವುದು ಸ್ಪಷ್ಟವಾಗಿದೆ. ಇನ್ನೂ ಅದೆಷ್ಟು ಮಹಿಳೆಯರ ಮೇಲೆ ಅವನು ದೌರ್ಜನ್ಯವೆಸಗಿದ್ದಾನೋ? ಮುಂದಿನ ವರ್ಷ ರಿಟೈರಾಗಬೇಕಿರುವ ಮತ್ತು ಒಬ್ಬ ಇನ್ಸ್​ಪೆಕ್ಟರ್ ಆಗಿ ಸೇವೆ ಆರಂಭಿಸಿರಬಹುದಾದ ಅವನು ತನ್ನ ಸೇವೆಯ ಆರಂಭಿಕ ವರ್ಷಗಳಲ್ಲಿ ಹೇಗೆಲ್ಲ ಮೆರೆದಾಡಿರಬಹುದೆಂದು ಊಹಿಸಿ ನೋಡಿ.

ತುಮಕೂರು: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಸೇವೆಯಿಂದ ಅಮಾನತ್ತುಗೊಳ್ಳುವ ಜೊತೆಗೆ ಅರೆಸ್ಟ್ ಕೂಡ ಆಗಿರುವ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನ ರಾಸಲೀಲೆಗಳು ಜನವರಿ 3 ರಂದು ಅವನ ಚೇಂಬರ್​​ನಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಮಾತ್ರ ಸೀಮಿತವಾಗಿಲ್ಲ. ತನ್ನಲ್ಲಿಗೆ ದೂರು ತೆಗೆದುಕೊಂಡು ಬರುವ ಬೇರೆ ಮಹಿಳೆಯರ ಮೇಲೂ ರಾಮಚಂದ್ರಪ್ಪ ಕಾಕದೃಷ್ಟಿ ಬೀರಿದ್ದಾನೆ. ಅವನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ಜೊತೆ ಪೊಲೀಸ್ ಅಧಿಕಾರಿ ನಡೆದುಕೊಂಡ ರೀತಿಯ ಸಮಗ್ರ ಮಾಹಿತಿಯನ್ನು ನಮ್ಮ ವರದಿಗಾರನಿಗೆ ನೀಡಿದ್ದಾರೆ. ಸೈಟ್ ಖರೀದಿ ವಿಷಯದಲ್ಲಿ ವ್ಯಕ್ತಿಯೊಬ್ಬನಿಂದ ಸುಮಾರು ₹12 ಲಕ್ಷದಷ್ಟು ವಂಚನೆಗೊಳಗಾದ ಬಳಿಕ ದೂರು ದಾಖಲಿಸಲು ಮಧುಗಿರಿಗೆ ಹೋದಾದ ರಾಮಚಂದ್ರಪ್ಪ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅಕೆ ಹೇಗೋ ಅವನಿಂದ ಬಚಾವಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಚೇರಿಯಲ್ಲೇ ಮಹಿಳೆ ಜತೆ ರಾಸಲೀಲೆ ಕೇಸ್​: ಡಿವೈಎಸ್​ಪಿ ರಾಮಚಂದ್ರಪ್ಪಗೆ 14 ದಿನ ನ್ಯಾಯಾಂಗ ಬಂಧನ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.