Karnataka Assembly Polls; ರಾಮಲಿಂಗಾರೆಡ್ಡಿ ಮತ್ತು ಸೌಮ್ಯರೆಡ್ಡಿ 5 ವರ್ಷಗಳಿಂದ ಗೂಂಡಾಗಿರಿ ನಡೆಸುತ್ತಿದ್ದಾರೆ: ಕೆ ಅಣ್ಣಾಮಲೈ, ಬಿಜೆಪಿ ಧುರೀಣ

|

Updated on: May 08, 2023 | 5:24 PM

ರಾಮಲಿಂಗಾರೆಡ್ಡಿ ಮತ್ತ ಸೌಮ್ಯರೆಡ್ಡಿ ಕುಮ್ಮಕ್ಕಿನಿಂದಲೇ ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಭೀಕರ ಹಲ್ಲೆ ನಡೆದಿದೆ ಎಂದು ಅಣ್ಣಾಮಲೈ ಆರೋಪಿಸಿದರು.

ಬೆಂಗಳೂರು: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ನೇತೃತ್ವದಲ್ಲಿ ಸಂಸದ ತೇಜಸ್ವೀ ಸೂರ್ಯ (Tejasvi Surya), ಬೆಂಗಳೂರು ಚಾಮರಾಜಪೇಟೆಯ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ (Bhaskar Rao) ಹಾಗೂ ಪಕ್ಷದ ಇತರ ನಾಯಕರು ನಗರದ ಮಡಿವಾಳ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಟಿಎಮ್ ಲೇಔಟ್ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಗೂಂಡಾಗಿ ನಡೆಸುತ್ತಿರುವರೆಂದು ಅರೋಪಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತಾಡಿದ ಅಣ್ಣಾಮಲೈ, ಬಿಟಿಎಂ ಲೇಔಟ್ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಮತ್ತು ಅವರ ಮಗಳು ಹಾಗೂ ಜಯನಗರ ಶಾಸಕಿ ಸೌಮ್ಯರೆಡ್ಡಿ 2018ರಿಂದ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಹೇಳಿದರು. ಅವರ ಕುಮ್ಮಕ್ಕಿನಿಂದಲೇ ಕಳೆದ ರಾತ್ರಿ ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಭೀಕರ ಹಲ್ಲೆ ನಡೆದಿದೆ ಎಂದು ಅವರು ಆರೋಪಿಸಿದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಿಜೆಪಿ ಕಾರ್ಯಕರ್ತ ಹಲ್ಲೆಗೊಳಗಾದ ಘಟನೆಯ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ ಬಳಿಕ ಬಿಜೆಪಿ ಧುರೀಣರು ಧರಣಿ ನಿಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಶಿಕ್ಷಣ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 08, 2023 05:24 PM