ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ: ಸಾಕಿ ಸಲಹಿದವಳಿಗೆ ಇದೆಂಥಾ ಸ್ಥಿತಿ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಲಾಲಾಘಟ್ಟದಲ್ಲಿ 22 ವರ್ಷದ ಮಗನಿಂದ ತಾಯಿಯ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಸಾಕುಮಗನ ದರ್ಪ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ತಾಯಿ ಸಹೋದರನಿಂದ ದೂರು ಹಿನ್ನಲೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ, ಮೇ 25: 22 ವರ್ಷ ಸಾಕಿ ಸಲುಹಿದ ತಾಯಿ (Mother) ಮೇಲೆ ಸಾಕುಮಗನ ದರ್ಪ ತೋರಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಲಾಲಾಘಟ್ಟ ಗ್ರಾಮದಲ್ಲಿ ನಡೆದಿದೆ. ತಾಯಿ ನೀಲಮ್ಮ ಕೂದಲು ಹಿಡಿದು ಎಳೆದಾಡಿ ಸಾಕುಮಗ ಈಶ್ವರನಿಂದ ಮನಬಂದಂತೆ ಥಳಿಸಲಾಗಿದೆ. ಸಾಕುಮಗನ ಅಟ್ಟಹಾಸ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ. ಹಲ್ಲೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದುವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.