ಹರಿದ್ವಾರದಿಂದ ಬಂದಿದ್ದ ನಾಗಾ ಸಾಧುಗಳನ್ನ ವಾಪಾಸ್ ಕಳುಹಿಸಿದ ಪೊಲೀಸರು; ಇಲ್ಲಿದೆ ವಿಡಿಯೋ
ಕುತೂಹಲದ ಸಂಗತಿಯಾಗಿಯೇ ಉಳಿದಿರುವ ನಾಗಾ ಸಾಧುಗಳು ಇಂದು , ಬಿಡದಿ(Bidadi)ಯ ಸಮಾವೇಶ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ, ಹರಿದ್ವಾರದಿಂದ ಬಂದಿದ್ದ ನಾಗಾ ಸಾಧುಗಳನ್ನು(Naga sadhus) ಪೊಲೀಸರು ವಾಪಾಸ್ ಕಳುಹಿಸಿದ ಆರೋಪ ಇದೀಗ ಕೇಳಿಬಂದಿದೆ.
ರಾಮನಗರ, ಫೆ.25: ಹರಿದ್ವಾರದಿಂದ ಬಂದಿದ್ದ ನಾಗಾ ಸಾಧುಗಳನ್ನು(Naga sadhus) ಪೊಲೀಸರು ವಾಪಾಸ್ ಕಳುಹಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ಬೆಂಗಳೂರು- ಮೈಸೂರು ಹೆದ್ದಾರಿ ಬಳಿ ಮಾತನಾಡಿದ ಓರ್ವ ನಾಗಾ ಸಾಧು, ‘ನಾವು ಹರಿದ್ವಾರದಿಂದ ಬಂದಿದ್ದು, ಬಿಡದಿ(Bidadi)ಯ ಸಮಾವೇಶ ಸ್ಥಳಕ್ಕೆ ತೆರಳುತ್ತಿದ್ದೇವೆ. ಆದರೆ, ಪೊಲೀಸರು ನಮ್ಮನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ವಾಪಾಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು, ಮತ್ತೆ ಕಾರ್ಯಕ್ರಮಕ್ಕೆ ನಾವು ಹೋಗಲ್ಲ, ಬದಲಿಗೆ ಮೈಸೂರಿಗೆ ತೆರಳುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ