ಕಿಯೋನಿಕ್ಸ್ ಅಧ್ಯಕ್ಷರಾಗಿ ಶರತ್ ಬಚ್ಚೇಗೌಡ ಆಯ್ಕೆ; 3.5 ಟನ್ ಮಟನ್, 2.5 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ
ಕಿಯೋನಿಕ್ಸ್ ಅಧ್ಯಕ್ಷರಾಗಿ ಶಾಸಕ ಶರತ್ ಬಚ್ಚೇಗೌಡ(Sharath Bache Gowda) ಆಯ್ಕೆಯಾದ ಹೊಸಕೋಟೆ(Hosakote) ನಗರದ ಸೈಯದ್ ಪ್ಯಾಲೆಸ್ನಲ್ಲಿ 3.5 ಟನ್ ಮಟನ್ ಮತ್ತು 2.5 ಟನ್ ಚಿಕನ್ ಬಳಸಿ ಮುದ್ದೆ, ಚಿಕನ್ ಪ್ರೈ, ಮಟನ್ ಬಿರಿಯಾನಿ, ಮಟನ್ ಸಾಂಬಾರ್, ಮೊಟ್ಟೆ, ಇಡ್ಲಿ, ಅನ್ನ-ರಸಂ ಮತ್ತು ಮಜ್ಜಿಗೆ ಸೇರಿ ಭರ್ಜರಿ ಬಾಡೂಟ ವ್ಯವಸ್ಥೆ ಮಡಲಾಗಿತ್ತು.
ಬೆಂಗಳೂರು ಗ್ರಾಮಾಂತರ, ಫೆ.25: ಶಾಸಕ ಶರತ್ ಬಚ್ಚೇಗೌಡ(Sharath Bache Gowda) ಕಿಯೋನಿಕ್ಸ್ (Keonics) ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಇಂದು (ಫೆ.25) ಕ್ಷೇತ್ರದ ಕಾರ್ಯಕರ್ತರಿಗೆ ಹೊಸಕೋಟೆ(Hosakote) ನಗರದ ಸೈಯದ್ ಪ್ಯಾಲೆಸ್ನಲ್ಲಿ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಈ ಬಾಡೂಟದ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದ್ದು, ಮುಖಂಡರು ಕಾರ್ಯಕರ್ತರನ್ನೆಲ್ಲ ಒಂದೆಡೆ ಸೇರಿಸಿ 3.5 ಟನ್ ಮಟನ್ ಮತ್ತು 2.5 ಟನ್ ಚಿಕನ್ ಬಳಸಿ ಮುದ್ದೆ, ಚಿಕನ್ ಪ್ರೈ, ಮಟನ್ ಬಿರಿಯಾನಿ, ಮಟನ್ ಸಾಂಬಾರ್, ಮೊಟ್ಟೆ, ಇಡ್ಲಿ, ಅನ್ನ-ರಸಂ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಭರ್ಜರಿ ಬಾಡೂಟ ಸವಿಯಲು ಸಾವಿರಾರು ಜನ ಕಾರ್ಯಕರ್ತರು ಆಗಮಿಸಿದ್ದು, ಭರ್ಜರಿ ಬಾಡೂಟ ಸವಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos