CCL 2024: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಬಗ್ಗೆ ಅಖಿಲ್ ಅಕ್ಕಿನೇನಿ ಏನಂದ್ರು?
Celebrity Cricket League 2024: ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಮೊದಲ ಐದು ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿ, ಶಾರ್ಜಾದಂತಹ ಪ್ರಸಿದ್ಧ ಮೈದಾನದಲ್ಲಿ ಆಡುವುದು ನಮ್ಮ ಭಾಗ್ಯ ಎಂದು ಹೇಳಿದ್ದಾರೆ.
10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ಗೆ (Celebrity Cricket League 2024) ಭರ್ಜರಿ ಚಾಲನೆ ಸಿಕ್ಕಿದೆ. ಫೆಬ್ರವರಿ 23 ರಿಂದ ಆರಂಭವಾದ ಈ ಟೂರ್ನಿ ಮಾರ್ಚ್ 17 ರವರೆಗೆ ನಡೆಯಲಿದೆ. ಟಿವಿ9 ನೆಟ್‌ವರ್ಕ್ ಮತ್ತು ನ್ಯೂಸ್ 9 ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಟೂರ್ನಿಗೆ ಬಗ್ಗೆ ತೆಲುಗಿನ ಸ್ಟಾರ್ ನಟ ಹಾಗೂ ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿ ಮಾತನಾಡಿದ್ದು, ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಟೂರ್ನಿಯ ಮೊದಲ ಐದು ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ನಡೆಯಲ್ಲಿವೆ. ಈ ಬಗ್ಗೆ ಮಾತನಾಡಿದ ಅಖಿಲ್, ಶಾರ್ಜಾದಂತಹ ಪ್ರಸಿದ್ಧ ಮೈದಾನದಲ್ಲಿ ಆಡುವುದು ನಮ್ಮ ಭಾಗ್ಯ ಎಂದು ಹೇಳಿದರು. ನಮ್ಮ ತಂಡದಲ್ಲಿ ಉತ್ತಮ ವಾತಾವರಣವಿದೆ, ಇದು ತಂಡದ ಪ್ರದರ್ಶನದ ಮೇಲೆ ಉತ್ತಮ ಪರಿಣಾಮ ಬೀರುತ್ತಿದೆ. ನಮ್ಮ ಗೆಲುವಿನ ಗುಟ್ಟು ಇದು ಎಂದು ಹೇಳಿದ್ದಾರೆ. ತೆಲುಗು ವಾರಿಯರ್ಸ್ ತನ್ನ ಮುಂದಿನ ಪಂದ್ಯವನ್ನು ಮಾರ್ಚ್ 1 ರಂದು ಪಂಜಾಬ್ ವಿರುದ್ಧ ಹೈದರಾಬಾದ್ನಲ್ಲಿ ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ