RCB vs UPW, WPL 2024: ಆರ್ಸಿಬಿ ಗೆದ್ದ ತಕ್ಷಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫ್ಯಾನ್ಸ್ ಏನು ಮಾಡಿದ್ರು ನೋಡಿ
Women's Premier League 2024: ಮಹಿಳಾ ಪ್ರೀಮಿಯರ್ ಲೀಗ್ 2024 ರಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಶುಭಾರಂಭ ಮಾಡಿದೆ. ಯುಪಿ ವಾರಿಯರ್ಸ್ ವಿರುದ್ಧ 2 ರನ್ಗಳ ರೋಚಕ ಜಯ ಸಾಧಿಸಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಗೆದ್ದ ತಕ್ಷಣ ಅಭಿಮಾನಿಗಳು ಏನು ಮಾಡಿದರು ನೀವೇ ನೋಡಿ.
ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯಗೆ ಭರ್ಜರಿ ಆರಂಭ ಸಿಕ್ಕಿದ್ದು, ಮೊದಲ ಎರಡು ಪಂದ್ಯ ಕೊನೆಯ ಎಸೆತದವರೆಗೂ ಸಾಗಿತ್ತು. ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ (RCB vs UPW) ನಡುವಣ ಪಂದ್ಯ ಕೂಡ ರಣರೋಚಕವಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಇದರಲ್ಲಿ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ 2 ರನ್ಗಳ ಜಯ ಸಾಧಿಸಿತು. ಹೋಮ್ ಗ್ರೌಂಡ್ ಆಗಿರುವುದರಿಂದ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದರು. ಇಡೀ ಸ್ಟೇಡಿಯಂ ಹೌಸ್ಫುಲ್ ಆಗಿತ್ತು. ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭಕ್ಕೂ ಈ ಮಟ್ಟಿನಲ್ಲಿ ಅಭಿಮಾನಿಗಳು ಬಂದಿರಲಿಲ್ಲ. ಆರ್ಸಿಬಿ ಗೆದ್ದ ತಕ್ಷಣವಂತು ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಹರುಷ ಮುಗಿಲು ಮುಟ್ಟಿತ್ತು. ಇಡೀ ಸ್ಟೇಡಿಯಂನಲ್ಲಿ ”ಆರ್ಸಿಬಿ, ಆರ್ಸಿಬಿ” ಎಂದು ಉತ್ಸಾಹಭರಿತದಿಂದ ಕೂಗಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗೆಯೆ ಟಾಸ್ಗೆ ಬರುವ ವೇಳೆ ಮೈದಾನದಲ್ಲಿದ್ದ ಅಭಿಮಾನಿಗಳನ್ನು ಕಂಡು ನಾಯಕಿ ಸ್ಮೃತಿ ಮಂಧಾನ, ”ನಮಗೆ ಅದ್ಭುತ ಬೆಂಬಲ ಸಿಗುತ್ತಿದೆ,” ಎಂದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ