‘ಈ ಸಿನಿಮಾ ಬಗ್ಗೆ ಮಾತಾಡಿದ್ರೆ ಕಣ್ಣೀರು ಬರುತ್ತೆ’; ಗಳಗಳನೆ ಅತ್ತ ಬಿಗ್ ಬಾಸ್ ಶಶಿ
ಅನೂಪ್ ಆಂಟೋನಿ ನಿರ್ದೇಶನ ಮಾಡಿರುವ ‘ಮೆಹಬೂಬಾ’ ಸಿನಿಮಾದಲ್ಲಿ ಶಶಿ ಮತ್ತು ಪಾವನಾ ಗೌಡ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಶಶಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರನ್ನು ಚಿತ್ರತಂಡದವರು ಸಮಾಧಾನ ಮಾಡಿದ್ದಾರೆ. ಬಿಗ್ ಬಾಸ್ ವಿನ್ನರ್ ಶಶಿ ಕಣ್ಣೀರು ಹಾಕಿದ ವಿಡಿಯೋ ಇಲ್ಲಿದೆ..
ರೈತನಾಗಿ, ಬಿಗ್ ಬಾಸ್ ಬಿನ್ನರ್ (Bigg Boss Kannada Winner) ಆಗಿ ಖ್ಯಾತಿ ಪಡೆದ ಶಶಿ ಅವರು ‘ಮೆಹಬೂಬಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈಗ ತೆರೆಕಾಣಲು ಸಜ್ಜಾಗಿದೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಎಮೋಷನಲ್ ಆಗಿ ಮಾತನಾಡಿದ್ದಾರೆ. ತುಂಬ ಕಷ್ಟಪಟ್ಟು ‘ಮೆಹಬೂಬಾ’ ಸಿನಿಮಾ (Mehabooba Movie) ಮಾಡಿರುವ ಅವರು ಗಳಗಳನೆ ಅತ್ತಿದ್ದಾರೆ. ಶಶಿ ಮತ್ತು ಪಾವನಾ ಗೌಡ ಅವರು ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಮಾರ್ಚ್ 15ರಂದು ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರಕ್ಕಾಗಿ ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಂಡು ವೇದಿಕೆಯಲ್ಲೇ ಶಶಿ (Bigg Boss Shashi) ಕಣ್ಣೀರು ಹಾಕಿದ್ದಾರೆ. ‘ನನ್ನ ಜೀವನದಲ್ಲಿ ಮೆಹಬೂಬಾ ಸಿನಿಮಾ ತುಂಬ ಮುಖ್ಯ. ಬಿಗ್ ಬಾಸ್ ಗೆದ್ದ ನಂತರ ಹಲವು ಅವಮಾನ ಅನುಭವಿಸಿದ್ದೇನೆ. ಅದಕ್ಕೆಲ್ಲ ಉತ್ತರವಾಗಿ ಈ ಸಿನಿಮಾ ಮೂಡಿಬರಲಿದೆ. ಬಹಳ ಕಷ್ಟಪಟ್ಟು ಚಿತ್ರ ಮಾಡಿದ್ದೇವೆ. ಈ ಸಿನಿಮಾ ಬಗ್ಗೆ ಮಾತನಾಡಿದರೆ ಕಣ್ಣೀರು ಬರುತ್ತದೆ’ ಎಂದು ಅವರು ಅತ್ತಿದ್ದಾರೆ. ಕಣ್ಣೀರು ತಡೆಯಲಾಗದೇ ಒಂದೆರಡು ಕ್ಷಣ ಅವರು ವೇದಿಕೆಯಿಂದ ಪಕ್ಕಕ್ಕೆ ಸರಿದಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.