‘ಕಾಂತಾರ’ ಬಳಿಕ ಮತ್ತೆ ತಾಯಿ ಪಾತ್ರ ಮಾಡಿದ ಮಾನಸಿ ಸುಧೀರ್​; ಆದರೆ ಒಂದು ಟ್ವಿಸ್ಟ್​

‘ಕಾಂತಾರ’ ಬಳಿಕ ಮತ್ತೆ ತಾಯಿ ಪಾತ್ರ ಮಾಡಿದ ಮಾನಸಿ ಸುಧೀರ್​; ಆದರೆ ಒಂದು ಟ್ವಿಸ್ಟ್​

ಮದನ್​ ಕುಮಾರ್​
|

Updated on: Feb 25, 2024 | 9:02 AM

ನಟಿ ಮಾನಸಿ ಸುಧೀರ್​ ಅವರಿಗೆ ‘ಕಾಂತಾರ’ ಹಾಗೂ ‘ಜುಗಲ್​ ಬಂದಿ’ ಸಿನಿಮಾದ ಅವಕಾಶಗಳು ಒಂದೇ ಸಮಯಕ್ಕೆ ಬಂದಿದ್ದವು. ಅವುಗಳ ಪೈಕಿ ಅವರು ಮೊದಲು ಒಪ್ಪಿಕೊಂಡಿದ್ದೇ ‘ಜುಗಲ್​ ಬಂದಿ’ ಸಿನಿಮಾ. ‘ಇದರಲ್ಲಿ ನನ್ನದು ಒಂದು ವಿನೂತನ ಪಾತ್ರ. ಬಹಳ ಚಾಲೆಂಜಿಂಗ್​ ಆಗಿತ್ತು. ಈ ಚಿತ್ರದಲ್ಲಿ ನಾನು ಕೂಡ ಇದ್ದೇನೆ ಎಂಬುದು ನನಗೆ ಹೆಮ್ಮೆಯ ವಿಷಯ’ ಎಂದು ಮಾನಸಿ ಸುಧೀರ್​ ಹೇಳಿದ್ದಾರೆ.

ನಟಿ ಮಾನಸಿ ಸುಧೀರ್​ ಅವರು ‘ಕಾಂತಾರ’ (Kantara) ಸಿನಿಮಾದಲ್ಲಿ ಕಥಾನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ‘ಜುಗಲ್​ ಬಂದಿ’ (Jugal Bandi Movie) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕೂಡ ಅವರು ತಾಯಿಯ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಅವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‘ನನ್ನ ಪಾತ್ರದ ಹೆಸರು ಯಶೋದಾ. ಹಾಗೆಂದ ಕೂಡಲೇ ಕೃಷ್ಣ ನೆನಪಾಗುತ್ತಾನೆ. ಯಶೋದಾ ಎಂದರೆ ತಾಯಿಯ ಪ್ರೀತಿ, ವಾತ್ಸಲ್ಯ, ಮಮತೆ ನೆನಪಾಗುತ್ತದೆ. ಆದರೆ ಇಲ್ಲಿ ಇರುವ ತಾಯಿಗೆ ಮಗು ಇಲ್ಲ! ಅಮ್ಮ ಎಂದು ಕರೆಸಿಕೊಳ್ಳಲು ಆಕೆ ಕಾಯುತ್ತಾ ಇದ್ದಾಳೆ. ಕಾಂತಾರದ ಕಮಲ ಪಾತ್ರ ಒಂದು ರೇಂಜ್​ ಆದರೆ, ಈ ಯಶೋದಾ ಇನ್ನೊಂದು ಕಡೆ. ಇದು ತುಂಬ ವಿಭಿನ್ನವಾದ ಪಾತ್ರ. ಒಂದೇ ಸಮಯಕ್ಕೆ ಕಾಂತಾರ ಮತ್ತು ಜುಗಲ್​ ಬಂದಿ ಸಿನಿಮಾದ ಅವಕಾಶಗಳು ನನಗೆ ಬಂದಿದ್ದವು. ಮೊದಲು ಒಪ್ಪಿಕೊಂಡಿದ್ದು ಜುಗಲ್​ ಬಂದಿ ಸಿನಿಮಾ. ಇದು ವಿನೂತನ ಪಾತ್ರ. ತುಂಬ ಚಾಲೆಂಜಿಂಗ್​ ಆಗಿತ್ತು. ಈ ಸಿನಿಮಾದಲ್ಲಿ ನಾನು ಇದ್ದೇನೆ ಎಂಬುದೇ ನನಗೆ ಹೆಮ್ಮೆ. ’ ಎಂದು ಮಾನಸಿ ಸುಧೀರ್ (Manasi Sudhir)​ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.