Manasi Sudhir: ‘ಕಾಂತಾರ’ ಚಿತ್ರದ ಶಿವನ ತಾಯಿ ಕಮಲಾ ಅಲಿಯಾಸ್​ ಮಾನಸಿ ಸುಧೀರ್​ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್​ ವಿಚಾರ

Manasi Sudhir | Kantara Movie: ಮಾನಸಿ ಸುಧೀರ್​ ಅವರು ಮೊದಲು ಬಣ್ಣ ಹಚ್ಚಿದ್ದು ‘ರಮ್ಯ ಚೈತ್ರ ಕಾಲ’ ಸಿನಿಮಾದಲ್ಲಿ. ಆ ಚಿತ್ರಕ್ಕೆ ಸುನಿಲ್​ ಕುಮಾರ್​ ದೇಸಾಯಿ ನಿರ್ದೇಶನ ಮಾಡಿದ್ದರು.

Manasi Sudhir: ‘ಕಾಂತಾರ’ ಚಿತ್ರದ ಶಿವನ ತಾಯಿ ಕಮಲಾ ಅಲಿಯಾಸ್​ ಮಾನಸಿ ಸುಧೀರ್​ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್​ ವಿಚಾರ
ಮಾನಸಿ ಸುಧೀರ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 10, 2022 | 12:17 PM

ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ (Kantara) ಸಿನಿಮಾ ಸೂಪರ್​ ಹಿಟ್​ ಆಗಿದೆ. ಗಲ್ಲಾ ಪೆಟ್ಟಿಗೆಯಲ್ಲಿ 350 ಕೋಟಿ ರೂಪಾಯಿ ಸಮೀಪಿಸಿರುವ ಈ ಚಿತ್ರದಿಂದ ಕನ್ನಡ ಸಿನಿಮಾರಂಗದ ಹಿರಿಮೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಕಾಣಿಸಿಕೊಂಡ ಎಲ್ಲ ಪಾತ್ರಗಳು ಕೂಡ ಸಖತ್​ ಹೈಲೈಟ್​ ಆಗಿವೆ. ರಿಷಬ್​ ಶೆಟ್ಟಿ (Rishab Shetty) ಮಾಡಿದ ಶಿವ ಎಂಬ ಪಾತ್ರ ಎಲ್ಲರ ಅಚ್ಚುಮೆಚ್ಚಾಗಿದೆ. ಕಥಾನಾಯಕನ ತಾಯಿ ಕಮಲಾ ಎಂಬ ಪಾತ್ರದಲ್ಲಿ ಮಾನಸಿ ಸುಧೀರ್​ (Manasi Sudhir) ಅವರು ಮಿಂಚಿದ್ದಾರೆ. ಸದಾ ಕಾಲ ಸಿಟ್ಟು ಪ್ರದರ್ಶಿಸುವ ಅವರ ಪಾತ್ರ ಪ್ರೇಕ್ಷಕರ ಮನ ಗೆದ್ದಿದೆ. ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅಭಿಮಾನಿಗಳಿಗೆ ಇದೆ.

ಕಲಾ ರಂಗದಲ್ಲಿ ಮಾನಸಿ ಸುಧೀರ್​ ಅವರು ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ನಟನೆ ಮಾತ್ರವಲ್ಲದೇ ಭರತನಾಟ್ಯದಲ್ಲೂ ಅವರು ಪಳಗಿದ್ದಾರೆ. ಅವರು ಮೊದಲು ಬಣ್ಣ ಹಚ್ಚಿದ್ದು ‘ರಮ್ಯ ಚೈತ್ರ ಕಾಲ’ ಸಿನಿಮಾದಲ್ಲಿ. ಆ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸುನಿಲ್​ ಕುಮಾರ್​ ದೇಸಾಯಿ ಅವರು ಆ್ಯಕ್ಷನ್​-ಕಟ್​ ಹೇಳಿದ್ದರು. ಅಂದು ಅವಕಾಶ ಕೊಟ್ಟ ನಿರ್ದೇಶಕರನ್ನು ಮಾನಸಿ ಸುಧೀರ್​ ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.

ಪದವಿ ಶಿಕ್ಷಣ ಪಡೆಯುವಾಗ ಮಾನಸಿ ಸುಧೀರ್​ ಅವರು ‘ರಮ್ಯ ಚೈತ್ರ ಕಾಲ’ ಚಿತ್ರದಲ್ಲಿ ನಟಿಸಿದರು. ಮರುವರ್ಷ ಅವರ ಮದುವೆ ಆಯಿತು. ಇಂಗ್ಲಿಷ್​ ಎಂ.ಎ. ಮುಗಿಸಿ ಉಪನ್ಯಾಸಕಿಯಾಗಿ ಕೆಲಸ ಮಾಡಲು ಆರಂಭಿಸಿದರು. ನಂತರ ಹೆಣ್ಣು ಮಗು ಜನಿಸಿತು. ಇಷ್ಟೆಲ್ಲ ಬ್ಯುಸಿ ದಿನಚರಿ ನಡುವೆ ಸಿನಿಮಾ ಅವಕಾಶಗಳು ಬಂದರೂ ಕೂಡ ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾ ಬಂದರು.

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ನಿಖಿಲ್​ ಮಂಜು ನಿರ್ದೇಶನದ ‘ರಿಸರ್ವೇಷನ್​’ ಚಿತ್ರದಲ್ಲಿ ಮಾನಸಿ ಸುಧೀರ್​ ನಟಿಸಿದರು. ರಾಘವೇಂದ್ರ ರಾಜ್​ಕುಮಾರ್​ ನಟನೆಯ ‘ಅಮ್ಮನ ಮನೆ’ ಸಿನಿಮಾದಲ್ಲೂ ಅವರು ಮುಖ್ಯಭೂಮಿಕೆ ನಿಭಾಯಿಸಿದರು. ಆ ಕುರಿತು ಟಿವಿ9 ವಿಶೇಷ ಸಂದರ್ಶನದಲ್ಲಿ ತಮ್ಮ ಅನುಭವವನ್ನು ಮಾನಸಿ ಸುಧೀರ್​ ಹಂಚಿಕೊಂಡಿದ್ದಾರೆ.

‘ಈ ಎಲ್ಲ ಅನುಭವಗಳು ಚೆನ್ನಾಗಿತ್ತು. ಡ್ಯಾನ್ಸರ್​ ಆದ ಕಾರಣ ನನ್ನ ಎಕ್ಸ್​ಪ್ರೆಷನ್ಸ್​ ಜಾಸ್ತಿ ಇತ್ತು. ಸಿನಿಮಾಗಾಗಿ ಅದನ್ನು ಸ್ವಲ್ಪ ಕಂಟ್ರೋಲ್​ ಮಾಡಬೇಕಿತ್ತು. ಈ ಎಲ್ಲ ಪ್ರಾಜೆಕ್ಟ್​ಗಳ ಮೂಲಕ ಕಲಿತೆ. ನಾನು ರಂಗಭೂಮಿ ಕಲಾವಿದೆ ಅಲ್ಲ. ನೀನಾಸಂನಲ್ಲಿ 21 ದಿನದ ವರ್ಕ್​ಶಾಪ್​ನಲ್ಲಿ ಭಾಗವಹಿಸಿದ್ದೇನೆ ಅಷ್ಟೇ. ಈ ಎಲ್ಲ ಅನುಭಗಳಿಂದ ನಾನು ಕಾಂತಾರ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುವ ರೀತಿ ಅಭಿನಯ ನೀಡಲು ಸಾಧ್ಯವಾಯ್ತು’ ಎಂದು ತಮ್ಮ ಸಿನಿಜರ್ನಿಯನ್ನು ಮೆಲುಕು ಹಾಕಿದ್ದಾರೆ ಮಾನಸಿ ಸುಧೀರ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:17 pm, Thu, 10 November 22

ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?