Manasi Sudhir: ‘ಕಾಂತಾರ’ ಸಿನಿಮಾ ಬಗ್ಗೆ ಚಂದದ ಕವನ; ನಗುನಗುತ್ತಾ ಓದಿದ ಮಾನಸಿ ಸುಧೀರ್
Manasi Sudhir | Sapthami Gowda: ಉಡುಪಿಯ ಲೇಖಕಿ ಶೋಭಾ ಹರಿಪ್ರಸಾದ್ ಅವರು ಬರೆದ ಒಂದು ಕವನವನ್ನು ಮಾನಸಿ ಸುಧೀರ್ ಓದಿದ್ದಾರೆ. ಕವನ ವಾಚನ ಕೇಳಿ ಖುಷಿಯಿಂದ ತಲೆದೂಗಿದ್ದಾರೆ ನಟಿ ಸಪ್ತಮಿ ಗೌಡ.
ನಟಿ, ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ (Manasi Sudhir) ಅವರಿಗೆ ‘ಕಾಂತಾರ’ (Kantara) ಸಿನಿಮಾದಿಂದ ಸಖತ್ ಜನಪ್ರಿಯತೆ ಸಿಕ್ಕಿದೆ. ಈ ಚಿತ್ರದಲ್ಲಿ ಕಥಾನಾಯಕನ ತಾಯಿ ಪಾತ್ರ ಮಾಡಿರುವ ಅವರ ನಟನೆಗೆ ಜನರು ಚಪ್ಪಾಳೆ ತಟ್ಟಿದ್ದಾರೆ. ಕಮಲ ಎಂಬ ಆ ಪಾತ್ರ ಸಖತ್ ಹೈಲೈಟ್ ಆಗಿದೆ. ಈ ಸಿನಿಮಾ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದೆ. ಅನೇಕರು ಈ ಸಿನಿಮಾ ಬಗ್ಗೆ ಕವನ ಬರೆದಿದ್ದಾರೆ. ಉಡುಪಿಯ ಲೇಖಕಿ ಶೋಭಾ ಹರಿಪ್ರಸಾದ್ ಅವರು ಬರೆದ ಒಂದು ಕವನವನ್ನು ಟಿವಿ9 ಸ್ಟುಡಿಯೋದಲ್ಲಿ ಕುಳಿತು ಓದಿದ್ದಾರೆ ಮಾನಸಿ ಸುಧೀರ್. ಕವನ ವಾಚನ ಕೇಳಿ ಖುಷಿಯಿಂದ ತಲೆದೂಗಿದ್ದಾರೆ ನಟಿ ಸಪ್ತಮಿ ಗೌಡ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 10, 2022 08:02 AM
Latest Videos