ಹಿಂದಿಯಲ್ಲಿ ಹೆಚ್ಚುತ್ತಲೇ ಇದೆ ‘ಕಾಂತಾರ’ ಅಬ್ಬರ; ಅಬ್ಬಬ್ಬಾ..19 ದಿನದ ಕಲೆಕ್ಷನ್ ಇಷ್ಟೊಂದಾ?
ಹಿಂದಿಯಲ್ಲಿ ಆರಂಭದ ದಿನಗಳಲ್ಲಿ ಈ ಚಿತ್ರ ಒಂದೆರಡು ಕೋಟಿ ಮಾತ್ರ ಕಲೆಕ್ಷನ್ ಮಾಡಿತು. ದಿನ ಕಳೆದಂತೆ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಿಕ್ಕಿತು. ಇದು ಚಿತ್ರಕ್ಕೆ ಪ್ಲಸ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ.
‘ಕಾಂತಾರ’ ಸಿನಿಮಾ (Kantara Movie) ಹಿಂದಿಯಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಕಲೆಕ್ಷನ್ ಕಡಿಮೆ ಆಗುವ ಸೂಚನೆಯೇ ಸಿಗುತ್ತಿಲ್ಲ. ಹಿಂದಿಯಲ್ಲಿ ಈ ಸಿನಿಮಾ ತೆರೆಗೆ ಬಂದು 19 ದಿನ ಕಳೆದಿದೆ. ಸಾಮಾನ್ಯ ದಿನವೂ ಈ ಚಿತ್ರ ಅಬ್ಬರದ ಕಲೆಕ್ಷನ್ ಮಾಡುತ್ತಿದೆ. ನಿರ್ಮಾಪಕರ ಜೇಬನ್ನು ಈ ಚಿತ್ರ ತುಂಬಿಸುತ್ತಿದೆ. ಹಿಂದಿಯಲ್ಲಿ ಈ ಚಿತ್ರದ ಗಳಿಕೆ 50 ಕೋಟಿ ರೂಪಾಯಿ ಸಮೀಪಿಸಿದೆ. ಈಗಾಗಲೇ ‘ಕೆಜಿಎಫ್’ ಚಿತ್ರದ (KGF Movie) ಹಿಂದಿ ಅವತರಣಿಕೆಯ ಗಳಿಕೆಯನ್ನು ಈ ಸಿನಿಮಾ ಮುರಿದಿದ್ದು, ಇನ್ನೂ ಅನೇಕ ಚಿತ್ರಗಳ ಕಲೆಕ್ಷನ್ ಹಿಂದಿಕ್ಕಲು ಈ ಚಿತ್ರ ರೆಡಿ ಆಗಿದೆ.
‘ಕಾಂತಾರ’ ಸಿನಿಮಾ ಕನ್ನಡದಲ್ಲಿ ತೆರೆಗೆ ಬಂದಿದ್ದು ಸೆಪ್ಟೆಂಬರ್ 30ಕ್ಕೆ. ಇದಾದ ಕೆಲವೇ ಕೆಲವು ವಾರಗಳ ಬಳಿಕ ಈ ಚಿತ್ರ ಹಿಂದಿಯಲ್ಲಿ ರಿಲೀಸ್ ಆಯಿತು. ಹಿಂದಿಯಲ್ಲಿ ಆರಂಭದ ದಿನಗಳಲ್ಲಿ ಈ ಚಿತ್ರ ಒಂದೆರಡು ಕೋಟಿ ಮಾತ್ರ ಕಲೆಕ್ಷನ್ ಮಾಡಿತು. ದಿನ ಕಳೆದಂತೆ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಿಕ್ಕಿತು. ಇದು ಚಿತ್ರಕ್ಕೆ ಪ್ಲಸ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ.
‘ಕಾಂತಾರ’ ಸಿನಿಮಾದ ಮಂಗಳವಾರ (ನವೆಂಬರ್ 1) 2.30 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರದ ಆರಂಭದಲ್ಲಿ ಸಿನಿಮಾ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ನಿಜಕ್ಕೂ ಸಾಧನೆಯೇ ಸರಿ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 47.55 ಕೋಟಿ ರೂಪಾಯಿ ಆಗಿದೆ. ‘ಕೆಜಿಎಫ್’ ಹಿಂದಿ ವರ್ಷನ್ 44 ಕೋಟಿ ರೂ. ಬಾಚಿಕೊಂಡಿತ್ತು. ಆ ದಾಖಲೆಯನ್ನು ಈ ಚಿತ್ರ ಮುರಿದಿದೆ.
‘ಕಾಂತಾರ’ ಚಿತ್ರ ಕನ್ನಡದಲ್ಲಿ ಮಾತ್ರ ತೆರೆಗೆ ಬಂದಿತ್ತು. ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದರು. ಸಿನಿಮಾ ತಂಡದವರು ಬಹುಬೇಗನೆ ಈ ಚಿತ್ರವನ್ನು ಹಿಂದಿಯಲ್ಲೂ ಬಿಡುಗಡೆ ಮಾಡಿದರು. ಇದು ಚಿತ್ರತಂಡಕ್ಕೆ ಸಹಕಾರಿ ಆಗಿದೆ. ಸಿನಿಮಾ ಹಿಂದಿಯಲ್ಲಿ ಇನ್ನೂ ಕೆಲ ದಿನ ತನ್ನ ಅಬ್ಬರ ಮುಂದುವರಿಸಲಿದೆ.
ಇದನ್ನೂ ಓದಿ: ‘ರಾಮ್ ಸೇತು’ ಎದುರು ಹೆಚ್ಚಾಯ್ತು ‘ಕಾಂತಾರ’ ಶೋಗಳ ಸಂಖ್ಯೆ; ಮತ್ತೆ ಎಡವಿದ ಅಕ್ಷಯ್ ಕುಮಾರ್
‘ಕಾಂತಾರ’ ಚಿತ್ರದಲ್ಲಿ ರಿಷಬ್ ನಟಿಸುವುದರ ಜತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ‘ಕೆಜಿಎಫ್’ ಚಿತ್ರಕ್ಕೆ ಈ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿತ್ತು. ಈ ಕಾರಣದಿಂದಲೂ ಚಿತ್ರಕ್ಕೆ ಹೈಪ್ ಸಿಕ್ಕಿದೆ.