Amitabh Bachchan: ಪುನೀತ್​​ ಬಗ್ಗೆ ಅಮಿತಾಭ್​ ಬಚ್ಚನ್​ ಮಾತು; ದಿಗ್ಗಜ ನಟನಿಗೂ ಕಾಡುತ್ತಿದೆ ಅಪ್ಪು ನಗು

Puneeth Rajkumar | Gandhada Gudi: ‘ಪುನೀತ್​ ರಾಜ್​ಕುಮಾರ್​ ಅವರನ್ನು ನಾವೆಲ್ಲರೂ ಅಪ್ಪು ಅಂತ ಪ್ರೀತಿಯಿಂದ ಕರೆಯುತ್ತಿದ್ವಿ. ಅವರ ಬಗ್ಗೆ ಭೂತಕಾಲದಲ್ಲಿ ಮಾತನಾಡಲು ಕಷ್ಟ ಆಗುತ್ತದೆ’ ಎಂದು ಬಿಗ್​ ಬಿ ಮಾತು ಆರಂಭಿಸಿದ್ದಾರೆ.

Amitabh Bachchan: ಪುನೀತ್​​ ಬಗ್ಗೆ ಅಮಿತಾಭ್​ ಬಚ್ಚನ್​ ಮಾತು; ದಿಗ್ಗಜ ನಟನಿಗೂ ಕಾಡುತ್ತಿದೆ ಅಪ್ಪು ನಗು
ಅಮಿತಾಭ್​ ಬಚ್ಚನ್​, ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Nov 10, 2022 | 2:49 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಮ್ಮೊಂದಿಗೆ ಇಲ್ಲ ಎಂಬ ನೋವು ಎಂದಿಗೂ ಮರೆ ಆಗುವಂಥದ್ದಲ್ಲ. ಅಪ್ಪು ಇಲ್ಲ ಎಂಬ ಸತ್ಯವನ್ನು ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿನಿಮಾಗಳ ಮೂಲಕ ‘ಪವರ್​ ಸ್ಟಾರ್​’ ಎಂದಿಗೂ ಶಾಶ್ವತವಾಗಿ ಇರುತ್ತಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ಪರಭಾಷೆಯ ಅನೇಕ ಸೆಲೆಬ್ರಿಟಿಗಳ ಜೊತೆಗೂ ಪುನೀತ್​ ರಾಜ್​ಕುಮಾರ್​ ಸ್ನೇಹ ಹೊಂದಿದ್ದರು. ಅವರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಅಪ್ಪು ಅವರ ನಗುಮುಖವನ್ನು ಇಷ್ಟಪಡದವರೇ ಇಲ್ಲ. ದಿಗ್ಗಜ ನಟ ಅಮಿತಾಭ್​ ಬಚ್ಚನ್​ (Amitabh Bachchan) ಕೂಡ ಪುನೀತ್​ ರಾಜ್​ಕುಮಾರ್​ ಸ್ಮೈಲ್​ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋವನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರು ಬಹಳ ಪ್ರೀತಿಯಿಂದ ಮಾಡಿದ ಸಾಕ್ಷ್ಯಚಿತ್ರ ‘ಗಂಧದ ಗುಡಿ’. ಈ ಡಾಕ್ಯುಮೆಂಟರಿಯ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನ ಅವರು ನಿಧನರಾಗಿದ್ದು ನೋವಿನ ಸಂಗತಿ. ಈ ವರ್ಷ ಅಕ್ಟೋಬರ್​ 28ರಂದು ‘ಗಂಧದ ಗುಡಿ’ ರಿಲೀಸ್​ ಮಾಡಲಾಯಿತು. ಅದಕ್ಕೂ ಮುನ್ನ ಅದ್ದೂರಿಯಾಗಿ ಪ್ರೀ-ರಿಲೀಸ್​ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮಕ್ಕೆ ಅಮಿತಾಭ್​ ಬಚ್ಚನ್​ ಬರಬೇಕಿತ್ತು. ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಮುಂಬೈನಿಂದಲೇ ಅವರು ಒಂದು ವಿಡಿಯೋ ಸಂದೇಶ ಕಳಿಸಿದ್ದರು. ಆ ವಿಡಿಯೋ ಈಗ ವೈರಲ್​ ಆಗಿದೆ.

ಇದನ್ನೂ ಓದಿ
Image
Gandhada Gudi: ಗಳಗಳನೆ ಕಣ್ಣೀರು ಹಾಕಿದ ಅನುಶ್ರೀ; ‘ಗಂಧದ ಗುಡಿ’ಯಲ್ಲಿ ಅಪ್ಪು​ ನೋಡಿದ ಬಳಿಕ ನಿರೂಪಕಿ ಭಾವುಕ ಮಾತು
Image
Gandhada Gudi: ‘ಗಂಧದ ಗುಡಿ’ ಗೆಲುವಿಗೆ ಪ್ರಾರ್ಥನೆ; ದೊಡ್ಡ ಗಣಪತಿ ದೇವಸ್ಥಾನದಲ್ಲಿ ಟಿಕೆಟ್​ ಇಟ್ಟು ಅಮೋಘವರ್ಷ ಪೂಜೆ
Image
Gandhada Gudi: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ‘ಗಂಧದ ಗುಡಿ’: ಅಪ್ಪು ಕನಸನ್ನು ನನಸು ಮಾಡುತ್ತಿರುವ ಫ್ಯಾನ್ಸ್​
Image
Gandhada Gudi: ಅಂತೂ ಮೌನ ಮುರಿದ ಅಶ್ವಿನಿ ಪುನೀತ್​ ರಾಜ್​ಕುಮಾರ್​; ‘ಗಂಧದ ಗುಡಿ’ ಬಗ್ಗೆ ಇಲ್ಲಿದೆ ಮೊದಲ ಸಂದರ್ಶನ

ಅಪ್ಪು ಬಗ್ಗೆ ಅಮಿತಾಭ್​ ಬಚ್ಚನ್​ ಹೇಳಿದ್ದೇನು?

‘ಪುನೀತ್​ ರಾಜ್​ಕುಮಾರ್​ ಅವರನ್ನು ನಾವೆಲ್ಲರೂ ಅಪ್ಪು ಅಂತ ಪ್ರೀತಿಯಿಂದ ಕರೆಯುತ್ತಿದ್ವಿ. ಅವರ ಬಗ್ಗೆ ಭೂತಕಾಲದಲ್ಲಿ ಮಾತನಾಡಲು ಕಷ್ಟ ಆಗುತ್ತದೆ’ ಎಂದು ಬಿಗ್​ ಬಿ ಮಾತು ಆರಂಭಿಸಿದ್ದಾರೆ. ‘ಅವರು ಚಿಕ್ಕ ಬಾಲಕನಾಗಿದ್ದಾಗ ನಾನು ಮೊದಲ ಬಾರಿ ಭೇಟಿ ಮಾಡಿದೆ. ಯಾವಾಗ ಭೇಟಿ ಆದರೂ ಕೂಡ ಅವರ ಮುಖದಲ್ಲಿ ಸುಂದರವಾದ ನಗು ಇರುತ್ತಿತ್ತು. ನಮ್ಮಲ್ಲರಿಗೂ ಅವರು ಹತ್ತಿರವಾಗಲು ಆ ನಗುವೇ ಕಾರಣ ಅಂತ ನಾನು ನಂಬಿದ್ದೇನೆ’ ಎಂದಿದ್ದಾರೆ ಅಮಿತಾಭ್​ ಬಚ್ಚನ್​.

‘ಗಂಧದ ಗುಡಿ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ನಟಿಸಿಲ್ಲ. ಅವರು ತಾವಾಗಿಯೇ ಕಾಣಿಸಿಕೊಂಡಿದ್ದಾರೆ. ಸಮೃದ್ಧವಾದ ಕರ್ನಾಟಕದ ಕಾಡನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಅಪ್ಪು ಅವರ ಮ್ಯಾಜಿಕಲ್​ ಜರ್ನಿಯಲ್ಲಿ ಎಲ್ಲರೂ ಭಾಗವಹಿಸಿ. ಪರಿಸರದ ಜೊತೆ ಸಾಮರಸ್ಯದಿಂದ ಬದುಕುವ ಬಗ್ಗೆ ಪುನೀತ್​ ಅವರು ಈ ಸಾಕ್ಷ್ಯಚಿತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ನಮ್ಮ ಮಕ್ಕಳಿಗಾಗಿ ಇರುವ ಚಿತ್ರ ಇದು. ನಾವೆಲ್ಲರೂ ನಮ್ಮ ಅರಣ್ಯ ಸಂಪತ್ತಿನ ಬಗ್ಗೆ ಹೆಮ್ಮೆ ಪಡುವಂತಹ ಚಿತ್ರ. ಗಂಧದ ಗುಡಿಗೆ ಯಶಸ್ಸು ಸಿಗಲಿ’ ಎಂದು ಅಮಿತಾಭ್​ ಬಚ್ಚನ್​ ಹೇಳಿದ್ದಾರೆ.

ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಅಮಿತಾಭ್​ ಬಚ್ಚನ್​ ಅವರಿಗೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಧನ್ಯವಾದ ಸಲ್ಲಿಸಿದ್ದಾರೆ. ‘ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು’ ಎಂದು ಅಶ್ವಿನಿ ಪೋಸ್ಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ