ಬರ್ಥ್​ಡೇ ಬಾಯ್ ಶರತ್ ಬಚ್ಚೇಗೌಡ ಮೇಲೆ ನೋಟುಗಳನ್ನು ಎಸೆದು ಅತಿರೇಕತೆ ಪ್ರದರ್ಶಿಸಿದ ಅಭಿಮಾನಿಗಳು

ಬರ್ಥ್​ಡೇ ಬಾಯ್ ಶರತ್ ಬಚ್ಚೇಗೌಡ ಮೇಲೆ ನೋಟುಗಳನ್ನು ಎಸೆದು ಅತಿರೇಕತೆ ಪ್ರದರ್ಶಿಸಿದ ಅಭಿಮಾನಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 02, 2023 | 5:18 PM

ಶರತ್ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಬೇರೆ ರೀತಿ ಪ್ರದರ್ಶಿಸಿದ್ದಾರೆ. ಅವರ ಮೇಲೆ ಹೂವಿನ ಜೊತೆ ಕರೆನ್ಸಿ ನೋಟುಗಳನ್ನು ಸಹ ಎಸೆದಿದ್ದಾರೆ. ಪಾಪ, ಬರ್ಥ್ ಡೇ ಬಾಯ್ ತಾವೇ ಖುದ್ದಾಗಿ ನೆಲದ ಮೇಲೆ ಬಿದ್ದಿರುವ ನೋಟುಗಳನ್ನು ಎತ್ತಿಕೊಳ್ಳುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು

ದೇವನಹಳ್ಳಿ: ಇದು ಅಭಿಮಾನವಲ್ಲ, ಅಭಿಮಾನದ ಅತಿರೇಕತೆ. ಹೊಸಕೋಟೆಯ ಕಾಂಗ್ರೆಸ್ ಶಾಸಕ (Congress MLA) ಶರತ್ ಕುಮಾರ್ ಬಚ್ಚೇಗೌಡ (Sharath Kumar Bache Gowda) ಇಂದು ತಮ್ಮ 42 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೊಸಕೋಟೆ (Hosakote) ತಾಲ್ಲೂಕಿನ ಬೆಂಡಿಗಾnಹಳ್ಳಿಯಲ್ಲಿ ಅವರು ತಮ್ಮ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಲುತ್ತಿರುವುದನ್ನು ಇಲ್ಲಿ ನೋಡಬಹುದು. ರಾಜಕಾರಣಿ, ಸಿನಿಮಾ ನಟ/ನಟಿಯರ ಹುಟ್ಟುಹಬ್ಬಗಳು ಈಗ ಸಾರ್ವಜನಿಕ ಉತ್ಸವಗಳಾಗಿ ಮಾರ್ಪಟ್ಟಿವೆ. ಇದಕ್ಕೆ ಸೆಲಿಬ್ರಿಟಿಗಳ ಕುಮ್ಮಕ್ಕು ಸಹ ಇರುತ್ತದೆ ಅನ್ನೋದು ಸುಳ್ಳಲ್ಲ. ಅಭಿಮಾನಿಗಳ ಮುಂದೆ ಅವರು ಕೇಕ್ ಕಟ್ ಮಾಡಿದ ಬಳಿಕ ಸೆಲೆಬ್ರೇಷನ್ ಕೊನೆಗೊಳ್ಳಬೇಕು. ಆದರೆ ಈಗ ಅದು ದಿನವೆಲ್ಲ ನಡೆಯುತ್ತದೆ. ಶರತ್ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಬೇರೆ ರೀತಿ ಪ್ರದರ್ಶಿಸಿದ್ದಾರೆ. ಅವರ ಮೇಲೆ ಹೂವಿನ ಜೊತೆ ಕರೆನ್ಸಿ ನೋಟುಗಳನ್ನು ಸಹ ಎಸೆದಿದ್ದಾರೆ. ಪಾಪ, ಬರ್ಥ್ ಡೇ ಬಾಯ್ ತಾವೇ ಖುದ್ದಾಗಿ ನೆಲದ ಮೇಲೆ ಬಿದ್ದಿರುವ ನೋಟುಗಳನ್ನು ಎತ್ತಿಕೊಳ್ಳುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಹಣವನ್ನು ಅವರು ಬಡವರಿಗೆ ನೀಡಿದರೆಂದು ಟಿವಿ9 ಕನ್ನಡ ವಾಹಿನಿಯ ವರದಿಗಾರ ತಿಳಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ