ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧ, ಆದರೆ ಪ್ರತಿಪಕ್ಷಗಳು ಸದನದಲ್ಲಿ ಅನುಕೂಲಕರ ವಾತಾವರಣ ಖಾತ್ರಿ ಪಡಿಸಬೇಕು : ಪ್ರಲ್ಹಾದ್ ಜೋಶಿ

ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧ, ಆದರೆ ಪ್ರತಿಪಕ್ಷಗಳು ಸದನದಲ್ಲಿ ಅನುಕೂಲಕರ ವಾತಾವರಣ ಖಾತ್ರಿ ಪಡಿಸಬೇಕು : ಪ್ರಲ್ಹಾದ್ ಜೋಶಿ

ಸಾಧು ಶ್ರೀನಾಥ್​
|

Updated on:Dec 02, 2023 | 4:20 PM

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸಭೆಯಲ್ಲಿ ಸರ್ಕಾರ ಭರವಸೆ ನೀಡಿದೆ. ಆದರೆ, ಪ್ರತಿಪಕ್ಷಗಳು ಚರ್ಚೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಖಚಿತಪಡಿಸಬೇಕು ಎಂದು ಹೇಳಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದ (Winter session of Parliament) ಮೊದಲು, ಪ್ರತಿಪಕ್ಷಗಳು (opposition) ಸದನದಲ್ಲಿ ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸಿದರೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Parliamentary Affairs Minister Pralhad Joshi) ಪ್ರತಿಪಾದಿಸಿದರು.

ಸೋಮವಾರದಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದ ಅಜೆಂಡಾವನ್ನು ಚರ್ಚಿಸಲು ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳ ನಾಯಕರು ಶನಿವಾರ ಇಲ್ಲಿ ಸಭೆ ಸೇರಿದಾಗ, ಪ್ರತಿಪಕ್ಷದ ನಾಯಕರು ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳಿಗೆ ಇಂಗ್ಲಿಷ್ ನಾಮಕರಣ ಮಾಡಬೆಕೆಂದು ಒತ್ತಾಯಿಸಿದರು. ಜೊತೆಗೆ ಬೆಲೆ ಏರಿಕೆ ಮತ್ತು ಮಣಿಪುರದಲ್ಲಿ ತನಿಖಾ ಸಂಸ್ಥೆಗಳ “ದುರುಪಯೋಗ”ದಂತಹ ಸಮಸ್ಯೆಗಳ ಬಗ್ಗೆ ಜರೂರಾಗಿ ಚರ್ಚಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂಓದಿ: ಸಂಸತ್ ಚಳಿಗಾಲದ ಅಧಿವೇಶನ: 18 ಮಸೂದೆಗಳನ್ನು ಮಂಡಿಸಲಿದೆ ಸರ್ಕಾರ

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸಭೆಯಲ್ಲಿ ಸರ್ಕಾರ ಭರವಸೆ ನೀಡಿದೆ. ಆದರೆ, ಪ್ರತಿಪಕ್ಷಗಳು ಚರ್ಚೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಖಚಿತಪಡಿಸಬೇಕು ಎಂದು ಹೇಳಿದರು.

ಸರ್ಕಾರವು ರಚನಾತ್ಮಕ ಚರ್ಚೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಸದನವು ಸುಗಮವಾಗಿ ನಡೆಯಲು ಪ್ರತಿಪಕ್ಷಗಳಿಗೆ ಮನವಿ ಮಾಡಿದೆ ಎಂದು ಜೋಶಿ ಹೇಳಿದರು. ಪ್ರತಿಪಕ್ಷಗಳ ಸಲಹೆಗಳನ್ನು ಸರಕಾರ ಸಕಾರಾತ್ಮಕವಾಗಿ ಸ್ವೀಕರಿಸಿದೆ ಎಂದು ತಿಳಿಸಿದರು. 19 ಬಿಲ್‌ಗಳು ಮತ್ತು ಎರಡು ಹಣಕಾಸು ಅಂಶಗಳು ಪರಿಗಣನೆಯಲ್ಲಿವೆ ಎಂದು ಜೋಶಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 02, 2023 04:17 PM