ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕುವವರಿಗೆ ರಾಮನಗರದಿಂದ ಹಗ್ಗ ಕಳಿಸುತ್ತೇನೆ: ಡಿಕೆ ಶಿವಕುಮಾರ್

ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕುವವರಿಗೆ ರಾಮನಗರದಿಂದ ಹಗ್ಗ ಕಳಿಸುತ್ತೇನೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 02, 2023 | 2:59 PM

ಕನಕಪುರದ ಜನರ ಕಷ್ಟಸುಖ ವಿಚಾರಿಸಲು ಸಮಯ ಸಿಕ್ಲಿರಲಿಲ್ಲ, ಹಾಗಾಗೇ ಅಧಿಕಾರಿಗಳನ್ನು ಕರೆತಂದು ಜನ ಸಂಪರ್ಕ ಸಭೆ ನಡೆಸುತ್ತಿರುವುದಾಗಿ ಹೇಳಿದ ಶಿವಕುಮಾರ ತಮ್ಮ ಅನುಪಸ್ಥಿತಿಯಲ್ಲಿ ಸಂಸದ ಡಿಕೆ ಸುರೇಶ್ ಗ್ರಾಮ ಸಭೆಗಳನ್ನು ನಡೆಸಿ ಜನರ ತೊಂದರೆಗಳನನ್ನು ವಿಚಾರಿಸಿದ್ದಾರೆ ಎಂದು ಹೇಳಿದರು.

ರಾಮನಗರ: ಜನ ಸಂಪರ್ಕ ನಡೆಸಲು ತಮ್ಮ ಕ್ಷೇತ್ರಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದರು. ಸೋಮವಾರದಿಂದ ಬೆಳಗಾವಿ ಅಧಿವೇಶನ ಆರಂಭವಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿದ್ದರಾಮಯ್ಯ ಸರ್ಕಾರವನ್ನು (Siddaramaiah government) ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದಾರೆ. ಬಿಜೆಪಿ ಜೊತೆ ಕೈಜೋಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಆರ್ ಅಶೋಕ (R Ashoka) ಸರ್ಕಾರವನ್ನು ಕಟ್ಟಿಹಾಕುತ್ತೇವೆ ಅಂತ ಪದೇಪದೆ ಹೇಳುತ್ತಿರುವುದನ್ನು ಶಿವಕುಮಾರ್ ಅವರ ಗಮನಕ್ಕೆ ತಂದಾಗ ರಾಮನಗರ ಜಿಲ್ಲೆಯಲ್ಲಿ ತೆಂಗಿನ ನಾರಿನಿಂದ ಉತ್ತಮ ಗುಣಮಟ್ಟದ ಹಗ್ಗ ನೇಯುತ್ತಾರೆ, ಕಟ್ಟಿ ಹಾಕುವವರ ಹೆಸರು ಹೇಳಿದರೆ ಅವರಿಗೆ ಕಳಿಸುವ ವ್ಯವಸ್ಥೆ ಮಾಡೋದಾಗಿ ಗೇಲಿ ಮಾಡಿದರು. ಕನಕಪುರದ ಜನರ ಕಷ್ಟಸುಖ ವಿಚಾರಿಸಲು ಸಮಯ ಸಿಕ್ಲಿರಲಿಲ್ಲ, ಹಾಗಾಗೇ ಅಧಿಕಾರಿಗಳನ್ನು ಕರೆತಂದು ಜನ ಸಂಪರ್ಕ ಸಭೆ ನಡೆಸುತ್ತಿರುವುದಾಗಿ ಶಿವಕುಮಾರ ಹೇಳಿದರು. ತಮ್ಮ ಅನುಪಸ್ಥಿತಿಯಲ್ಲಿ ಸಂಸದ ಡಿಕೆ ಸುರೇಶ್ ಗ್ರಾಮ ಸಭೆಗಳನ್ನು ನಡೆಸಿ ಜನರ ತೊಂದರೆಗಳನನ್ನು ವಿಚಾರಿಸಿದ್ದಾರೆ ಎಂದು ಅವರ ಹೇಳಿದ ಅವರು ಸಾಯಂಕಾಲದವರೆಗೆ ಕನಕಪುರದಲ್ಲಿ ಇರೋದಾಗಿ ತಿಳಿಸಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ