ತುಮಕೂರು: ನಾಗಾಸಾಧು ವೇಷದಲ್ಲಿ ಬಂದು ವ್ಯಕ್ತಿಯೊಬ್ಬರ ಕೈಯಲ್ಲಿನ ಉಂಗುರ ದೋಚಿ ಪರಾರಿ

ಕೈಯಲ್ಲಿ ಕಮಂಡಲ.. ಮೈಮೇಲೆ ಕಾವಿ.. ಹಣೆಯಲ್ಲಿ ವಿಭೂತಿ ಹಚ್ಚಿಕೊಂಡು ಬಂದಿದ್ದ ನಕಲಿ ನಾಗಸಾಧುಗಳು ಭಕ್ತರೊಬ್ಬರಿಗೆ ಮಂಕುಬೂದಿ ಎರಚಿ ಚಿನ್ನದ ಉಂಗುರ ಕದ್ದು ಪರಾರಿಯಾಗಿದ್ದಾರೆ. ಭಕ್ತರೊಬ್ಬರಿಗೆ ಧ್ಯಾನ ಮಾಡುವಂತೆ ಹೇಳಿ ಆತನ ಕೈಯಲ್ಲಿದ್ದ ಚಿನ್ನದುಂಗುರ ದೋಚಿಕೊಂಡು ಹೋಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು: ನಾಗಾಸಾಧು ವೇಷದಲ್ಲಿ ಬಂದು ವ್ಯಕ್ತಿಯೊಬ್ಬರ ಕೈಯಲ್ಲಿನ ಉಂಗುರ ದೋಚಿ ಪರಾರಿ
ನಕಲಿ ನಾಗಸಾಧು
Follow us
ಮಹೇಶ್ ಇ, ಭೂಮನಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Aug 13, 2023 | 1:10 PM

ತುಮಕೂರು, (ಆಗಸ್ಟ್ 13): ನಾಗಾಸಾಧುಗಳ(Naga Sadhu) ಸೋಗಿನಲ್ಲಿ ಬಂದು ಸಿನಿಮೀಯ ಸ್ಟೈಲಿನಲ್ಲಿ ಭಕ್ತರೊಬ್ಬರಿಗೆ ಮಂಕು ಬೂದಿ ಎರಚಿ ಚಿನ್ನದ ಉಂಗುರದೊಂದಿಗೆ(Gold Ring) ಪರಾರಿಯಾಗಿರುವ ಘಟನೆ ತುಮಕೂರು(Tumakuru)  ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ. ಹೌದು..ನಕಲಿ ನಾಗಾ ಸಾಧುಗಳು ಭಕ್ತರೊಬ್ಬರಿಗೆ ಕೈಯಲ್ಲಿ ರುದ್ರಾಕ್ಷಿ ಕೊಟ್ಟು ಧ್ಯಾನ ಮಾಡುವಂತೆ ಹೇಳಿ ಆತನ ಉಂಗುರ ಕದ್ದು ಓಡಿ ಹೋಗಿದ್ದಾರೆ. ತುಮಕೂರು ನಗರದ ಎಂ.ಜಿ ರಸ್ತೆಯಲ್ಲಿರುವ ಮಲ್ನಾಡ್ ಸ್ಟುಡಿಯೋ ಮಾಲೀಕ ಚಂದ್ರುವಿನ ಕೈಯಲ್ಲಿ ರುದ್ರಾಕ್ಷಿ ಇಟ್ಟು ಎರಡೂ ಕೈಯನ್ನು ಬಲವಾಗಿ ಹಿಡಿದು ಮಂತ್ರ ಹೇಳಿದ್ದಾರೆ. ಮಂತ್ರ ಹೇಳಿಸುವ ನೆಪದಲ್ಲಿ ಬೆರಳಲ್ಲಿದ್ದ ಉಂಗುರ ಲಪಟಾಯಿಸಿದ್ದು, ಬಳಿಕ ಎರಡು ನಿಮಿಷ ಧ್ಯಾನ ಮಾಡಿ ಎಂದು ಹೇಳಿ ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಧ್ಯಾನದಿಂದ ಹೊರಬಂದು ನೋಡಿದಾಗ ಬಲಗೈಯಲ್ಲಿದ್ದ ಉಂಗುರ ದೋಚಿಕೊಂಡು ಹೋಗಿರುವುದು ಚಂದ್ರು ಗಮನಕ್ಕೆ ಬಂದಿದೆ.ಕೂಡಲೇ ಈ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟು ಮೂವರು ನಾಗಸಾಧು ವೇಷದಲ್ಲಿ ತಿರುಗಾಡುತ್ತಿದ್ದ ಸಿಸಿಟಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಕೋಲಾರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳ್ಳರಿಂದ 30 ಲಕ್ಷ ರೂ, ಮೌಲ್ಯದ 30 ಬೈಕ್, 50 ಮೊಬೈಲ್ ವಶಕ್ಕೆ

ಫಸಲಿಗೆ ಬಂದಿದ್ದ ಅಡಿಕೆ ಮರಗಳು ನಾಶ

ತುಮಕೂರು: ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ನಾಶ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ. ವಿರುಪಾಕ್ಷಪ್ಪ ಎಂಬುವರು ಬೆಳೆಸಿದ್ದ ಅಡಿಕೆ ಮರಗಳನ್ನು ನಾಶ ಮಾಡಿದ್ದು, ಪಕ್ಕದ ಜಮೀನಿನ ಹರೀಶ್ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಜಮೀನು ತಮಗೆ ಸೇರಬೇಕೆಂದು ಅಡಿಕೆ ಮರ ಕಡಿದಿದ್ದಾರೆ ಎಂದು ಶಂಕಿಸಲಾಗಿದೆ.

ಇನ್ನಷ್ಟು ತುಮಕೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:26 pm, Sun, 13 August 23

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ