AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kendriya Vidyalaya Admission 2026-27: ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಆರಂಭ; ಪೋಷಕರು ಗಮನಿಸಬೇಕಾದ ಪ್ರಮುಖ ಅಂಶ ಇಲ್ಲಿವೆ

2026-27ನೇ ಸಾಲಿನ ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಮತ್ತು ನರ್ಸರಿ ಪ್ರವೇಶಾತಿ ಅರ್ಜಿಗಳು ಮಾರ್ಚ್ 20 ರಿಂದ ಆನ್‌ಲೈನ್‌ನಲ್ಲಿ ಲಭ್ಯವಾಗಿವೆ. ಏಪ್ರಿಲ್ 2ರೊಳಗೆ ಅರ್ಜಿ ಸಲ್ಲಿಸುವುದು ಅಗತ್ಯ. ಮಾರ್ಚ್ 31, 2026ಕ್ಕೆ ಮಗುವಿಗೆ 6 ವರ್ಷ ಆಗಿರಬೇಕು. ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಆಯ್ಕೆ ಪಟ್ಟಿ ಏಪ್ರಿಲ್ 8/9 ರಂದು ಬಿಡುಗಡೆಯಾಗಲಿದ್ದು, ಪ್ರಮುಖ ದಿನಾಂಕಗಳನ್ನು ತಪ್ಪದೇ ಗಮನಿಸಿ, ನಿಮ್ಮ ಮಗುವಿಗೆ ಸೀಟು ಖಚಿತಪಡಿಸಿಕೊಳ್ಳಿ.

Kendriya Vidyalaya Admission 2026-27: ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಆರಂಭ; ಪೋಷಕರು ಗಮನಿಸಬೇಕಾದ ಪ್ರಮುಖ ಅಂಶ ಇಲ್ಲಿವೆ
ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಆರಂಭ
ಅಕ್ಷತಾ ವರ್ಕಾಡಿ
|

Updated on:Mar 21, 2026 | 12:52 PM

Share

2026-27ನೇ ಶೈಕ್ಷಣಿಕ ವರ್ಷಕ್ಕೆ ದೇಶಾದ್ಯಂತ ಇರುವ ಕೇಂದ್ರೀಯ ವಿದ್ಯಾಲಯಗಳಲ್ಲಿ (KV) ಒಂದನೇ ತರಗತಿ ಮತ್ತು ನರ್ಸರಿ ಪ್ರವೇಶಕ್ಕಾಗಿ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಈ ಬಾರಿ ಪೋಷಕರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 20ರ ಬೆಳಿಗ್ಗೆ 10 ಗಂಟೆಯಿಂದ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್ 2 ರವರೆಗೆ ಕಾಲಾವಕಾಶವಿದ್ದು, ಆಸಕ್ತರು ನಿಗದಿತ ಸಮಯದೊಳಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.

ವಯೋಮಿತಿ ಮತ್ತು ಆದ್ಯತೆಗಳು:

ಒಂದನೇ ತರಗತಿಗೆ ಸೇರಬಯಸುವ ಮಕ್ಕಳಿಗೆ ವಯೋಮಿತಿಯ ನಿಯಮ ಬಹಳ ಮುಖ್ಯವಾಗಿದೆ. ಮಾರ್ಚ್ 31, 2026 ರ ವೇಳೆಗೆ ಮಗು ಕನಿಷ್ಠ 6 ವರ್ಷ ವಯಸ್ಸನ್ನು ಪೂರೈಸಿರಬೇಕು. ಇನ್ನು ಪ್ರವೇಶಾತಿಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಸೇನಾ ಸಿಬ್ಬಂದಿಯ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಉಳಿದ ಸೀಟುಗಳನ್ನು ವಿವಿಧ ಕೋಟಾಗಳು ಮತ್ತು ಸರ್ಕಾರದ ಮೀಸಲಾತಿ ನಿಯಮಗಳ ಅಡಿಯಲ್ಲಿ ಭರ್ತಿ ಮಾಡಲಾಗುತ್ತದೆ.

ಆಯ್ಕೆ ಪಟ್ಟಿ ಮತ್ತು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಿದ ನಂತರ ಪೋಷಕರು ಆಯ್ಕೆ ಪಟ್ಟಿಗಾಗಿ ಕಾಯಬೇಕಾಗುತ್ತದೆ. ನರ್ಸರಿ ಅಥವಾ ಕಿಂಡರ್‌ಗಾರ್ಟನ್ ತರಗತಿಗಳ ಮೊದಲ ಆಯ್ಕೆ ಪಟ್ಟಿ ಏಪ್ರಿಲ್ 8 ರಂದು ಪ್ರಕಟವಾದರೆ, ಒಂದನೇ ತರಗತಿಯ ಮೊದಲ ಪಟ್ಟಿ ಏಪ್ರಿಲ್ 9 ರಂದು ಬಿಡುಗಡೆಯಾಗಲಿದೆ. ಒಂದು ವೇಳೆ ಮೊದಲ ಪಟ್ಟಿಯಲ್ಲಿ ಅವಕಾಶ ಸಿಗದಿದ್ದರೆ, ಪೋಷಕರು ಏಪ್ರಿಲ್ 16 ರಂದು ಬಿಡುಗಡೆಯಾಗುವ ಎರಡನೇ ಪಟ್ಟಿ ಮತ್ತು ಏಪ್ರಿಲ್ 21 ರಂದು ಬರುವ ಮೂರನೇ ಪಟ್ಟಿಯನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ: ಗೂಗಲ್​ನಿಂದ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ; 10 ಲಕ್ಷ ರೂ. ಸ್ಟೈಫಂಡ್ ಪಡೆಯುವ ಅವಕಾಶ

ಇತರ ತರಗತಿಗಳ ಪ್ರವೇಶ ವಿಧಾನ:

ಕೇವಲ ಒಂದನೇ ತರಗತಿಗೆ ಮಾತ್ರ ಆನ್‌ಲೈನ್ ಅರ್ಜಿಗಳು ಲಭ್ಯವಿರುತ್ತವೆ. 2ನೇ ತರಗತಿಯಿಂದ 9ನೇ ತರಗತಿಯವರೆಗೆ (11ನೇ ತರಗತಿ ಹೊರತುಪಡಿಸಿ) ಪ್ರವೇಶ ಪಡೆಯಲು ಆಯಾ ಶಾಲೆಗಳಲ್ಲಿ ಖಾಲಿ ಇರುವ ಸೀಟುಗಳ ಆಧಾರದ ಮೇಲೆ ಏಪ್ರಿಲ್ 2 ರಿಂದ 8 ರವರೆಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ತರಗತಿಗಳ ಆಯ್ಕೆ ಪಟ್ಟಿ ಏಪ್ರಿಲ್ 13 ರಂದು ಪ್ರಕಟವಾಗಲಿದ್ದು, ಏಪ್ರಿಲ್ 15 ರಿಂದ 20 ರ ನಡುವೆ ಪ್ರವೇಶಾತಿ ಪ್ರಕ್ರಿಯೆ ನಡೆಯಲಿದೆ.

ಅಂತಿಮ ಹಂತದ ಪ್ರಕ್ರಿಯೆ:

ಹತ್ತನೇ ತರಗತಿಯ ಫಲಿತಾಂಶ ಬಂದ 10 ದಿನಗಳ ನಂತರ 11ನೇ ತರಗತಿಯ ನೋಂದಣಿ ಆರಂಭವಾಗುತ್ತದೆ. ಒಟ್ಟಾರೆ ಪ್ರವೇಶಾತಿ ಪ್ರಕ್ರಿಯೆಯು ಜೂನ್ 30 ಕ್ಕೆ ಮುಕ್ತಾಯಗೊಳ್ಳಲಿದ್ದು, ವಿಶೇಷ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಅಧಿಕಾರದೊಂದಿಗೆ ಜುಲೈ 7 ರವರೆಗೆ ಸೀಟುಗಳನ್ನು ಭರ್ತಿ ಮಾಡಲು ಅವಕಾಶವಿರುತ್ತದೆ. ಗುಣಮಟ್ಟದ ಶಿಕ್ಷಣ ನೀಡುವ ಕೇಂದ್ರೀಯ ವಿದ್ಯಾಲಯದಲ್ಲಿ ನಿಮ್ಮ ಮಗುವಿನ ಸೀಟು ಖಚಿತಪಡಿಸಿಕೊಳ್ಳಲು ಈ ದಿನಾಂಕಗಳನ್ನು ತಪ್ಪದೇ ನೆನಪಿಟ್ಟುಕೊಳ್ಳಿ.

ಆನ್‌ಲೈನ್​​ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Sat, 21 March 26

Follow Us
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು