ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಟಿವಿ9 ಡಿಜಿಟಲ್ ವಾಹಿನಿಯ 20-06-2026 ರ ದಿನಭವಿಷ್ಯ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ಶನಿವಾರದ ಮಹತ್ವ, ಗ್ರಹಗಳ ಸ್ಥಾನ ಮತ್ತು ವಿವಿಧ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಮೇಷ ರಾಶಿಯವರು ಐದು ಗ್ರಹಗಳ ಶುಭಫಲ ಪಡೆದರೂ, ಆತ್ಮಸ್ಥೈರ್ಯ ಮತ್ತು ಪರಿಶ್ರಮದಿಂದ ಯಶಸ್ಸು ಗಳಿಸಬಹುದೆಂದು ತಿಳಿಸಿದ್ದಾರೆ.
ಬೆಂಗಳೂರು, ಜೂ.20: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದು, 20-06-2026, ಶನಿವಾರ, ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಷಷ್ಠಿ, ಮಖಾ ನಕ್ಷತ್ರ, ವಜ್ರ ಯೋಗ, ಕೌಲವ ಕರಣ ಇರತಕ್ಕಂತ ಮಂಗಳಕರ ದಿನವಾಗಿದೆ. ಈ ದಿನದ ರಾಹುಕಾಲ ಬೆಳಿಗ್ಗೆ 9 ಗಂಟೆ 7 ನಿಮಿಷದಿಂದ 10 ಗಂಟೆ 43 ನಿಮಿಷದವರೆಗೆ ಇರುತ್ತದೆ. ಸರ್ವ ಸಿದ್ಧಿ, ಸಂಕಲ್ಪ ಮತ್ತು ಶುಭ ಕಾರ್ಯಗಳಿಗೆ ಸೂಕ್ತವಾದ ಶುಭ ಕಾಲ ಮಧ್ಯಾಹ್ನ 1 ಗಂಟೆ 57 ನಿಮಿಷದಿಂದ 3 ಗಂಟೆ 34 ನಿಮಿಷದವರೆಗೆ ಇರುತ್ತದೆ. ಇಂದು ಶನೇಶ್ವರ, ವೆಂಕಟೇಶ್ವರ ಮತ್ತು ಹನುಮಂತನಿಗೆ ಮೀಸಲಾದ ವಿಶೇಷ ದಿನವಾಗಿದ್ದು, ಈ ಮೂರು ದೇವರಲ್ಲಿ ಯಾವುದನ್ನಾದರೂ ಆರಾಧಿಸಲು ಅತ್ಯಂತ ಪವಿತ್ರವಾಗಿದೆ. ಅರಣ್ಯ ಗೌರಿ ವ್ರತ ಮತ್ತು ಕಾಳಿಕಾ ವ್ರತವನ್ನು ಆಚರಿಸಲು ಇದು ಉತ್ತಮ ದಿನವಾಗಿದೆ. ಚಳ್ಳಕೆರೆಯಲ್ಲಿ ಎರ್ರಿಸ್ವಾಮಿಗಳ ರಥೋತ್ಸವ ಕೂಡ ನಡೆಯುವ ದಿನವಾಗಿದೆ. ರವಿ ಮಿಥುನ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯ ಮಖಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jun 20, 2026 06:19 AM
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್

