Expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಓವರ್ ಸ್ಪೀಡಿಂಗ್ಗೆ ನೋ ಎಂದ ರಾಮನಗರ ಟ್ರಾಫಿಕ್ ಪೊಲೀಸರು!
ಇದೇ ಭಾಗದಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಕಾರು ಓಡಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರನ್ನು 6-7 ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ತಡೆದು ವಿಚಾರಿಸಿದರು.
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (Bengaluru-Mysuru Expressway) ಲೋಕಾರ್ಪಣೆಯಾದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದೆ ಮಾರಾಯ್ರೇ. ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಇಂದು ಮತ್ತೊಮ್ಮೆ ಫೀಲ್ಡಿಗಳಿದ ಕಾರಣ ಎಕ್ಸ್ ಪ್ರೆಸ್ ವೇನ ಹಲವಾರು ಕಡೆಗಳಲ್ಲಿ ಬೇರೆ ಬೇರೆ ಪೊಲೀಸ್ ಠಾಣೆಗಳ ಸಿಬ್ಬಂದಿ ಕಾಣಿಸಿದರು. ಓವರ್ ಸ್ಪೀಡಿಂಗ್ (overspeeding), ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು, ವಾಹನ ಸವಾರರ ಪರ್ಸ್ ಗಳಿಗೆ ರಂಧ್ರ ಬೀಳುವಷ್ಟು ಟೋಲ್ ಶುಲ್ಕ ಹೆಚ್ಚಳ, ಟೋಲ್ ಪ್ಲಾಜಾಗಳ ಮುಂದೆ ದಿನನಿತ್ಯ ಜಗಳಗಳು-ಹೀಗೆ ಹತ್ತು ಹಲವು ಸಮಸ್ಯೆಗಳು. ರಾಮನಗರಲ್ಲಿಂದು ಅಲೋಕ್ ಕುಮಾರ್ ಈ ಸಮಸ್ಯೆಗಳನ್ನು ಕುರಿತು ಸಾರ್ವಜನಿಕರು ಮತ್ತು ವಾಹನ ಸವಾರರೊಂದಿಗೆ ಚರ್ಚಿಸಿದರು. ಇದೇ ಭಾಗದಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಕಾರು ಓಡಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರನ್ನು 6-7 ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ತಡೆದು ವಿಚಾರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ