ತಮಿಳಿನಲ್ಲಿ ದೊಡ್ಡ ಯಶಸ್ಸು ಸಿಕ್ಕರೂ ರಮೇಶ್​ ಕನ್ನಡ ಚಿತ್ರರಂಗಕ್ಕೆ ವಾಪಸ್​ ಬಂದಿದ್ದರ ಹಿಂದಿತ್ತು ಕಾರಣ

ತಮಿಳಿನಲ್ಲಿ ದೊಡ್ಡ ಯಶಸ್ಸು ಸಿಕ್ಕರೂ ರಮೇಶ್​ ಕನ್ನಡ ಚಿತ್ರರಂಗಕ್ಕೆ ವಾಪಸ್​ ಬಂದಿದ್ದರ ಹಿಂದಿತ್ತು ಕಾರಣ

ಮದನ್​ ಕುಮಾರ್​
|

Updated on:Apr 10, 2023 | 8:20 PM

ಬಹುಭಾಷೆಯಲ್ಲಿ ನಟಿಸಿ ರಮೇಶ್​ ಅರವಿಂದ್​ ಫೇಮಸ್​ ಆಗಿದ್ದಾರೆ. ಆದರೆ ಅವರು ಇತರೆ ಭಾಷೆಗಿಂತ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಕನ್ನಡಕ್ಕೆ.

ನಟ ರಮೇಶ್​ ಅರವಿಂದ್​ (Ramesh Aravind) ಅವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಾಲಿವುಡ್​ನಲ್ಲಿ (Kollywood) ಅವರಿಗೆ ದೊಡ್ಡ ಯಶಸ್ಸು ಕೂಡ ಸಿಕ್ಕಿತ್ತು. ಆರಂಭದ ದಿನಗಳಲ್ಲೇ ಅವರು ಪರಭಾಷೆಯಲ್ಲಿ ಮಿಂಚಿದ್ದರು. ಹಾಗಿದ್ದರೂ ಕೂಡ ಅವರಿಗೆ ಸೆಳೆತ ಇದ್ದಿದ್ದು ಕನ್ನಡ ಚಿತ್ರರಂಗದ (Sandalwood) ಮೇಲೆ. ಹಾಗಾಗಿ ಅವರು ಚಂದನವನದಲ್ಲೇ ಹೆಚ್ಚು ಸಿನಿಮಾ ಮಾಡಿದರು. ಟಿವಿ9 ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ತಮಿಳುನಾಡಿನಲ್ಲಿ ನನಗೆ 2 ಸೂಪರ್​ ಹಿಟ್​ ಸಿಕ್ಕಿತು. ಆದರೆ ಬೆಂಗಳೂರು ನಮ್ಮ ಮನೆ. ಇಲ್ಲಿಗೆ ವಾಪಸ್​ ಬಂದಾಗ ಮನೆ ಎಂಬ ಖುಷಿಗಿಂತ ಬೇರೆ ಯಾವುದೂ ದೊಡ್ಡದಲ್ಲ’ ಎಂದು ರಮೇಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Apr 10, 2023 08:20 PM