ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
Ramesh Arvind: ರಾಧಿಕಾ ಕುಮಾರಸ್ವಾಮಿ ನಟನೆಯ ‘ಭೈರಾದೇವಿ’ ಸಿನಿಮಾದ ಟ್ರೈಲರ್ ಬಿಡಗುಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ ಕಣ್ಣಲ್ಲಿ ನಾಗವಲ್ಲಿಯ ಹೊಳಪು ಕಂಡಿದ್ದಾಗಿ ಹೇಳಿದ್ದಾರೆ.
ರಾಧಿಕಾ ಕುಮಾರಸ್ವಾಮಿ ನಟಿಸಿರುವ ‘ಭೈರಾದೇವಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇಂದು (ಸೆಪ್ಟೆಂಬರ್ 21) ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ರಮೇಶ್ ಅರವಿಂದ್ ‘ಭೈರಾದೇವಿ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ರಾಧಿಕಾ ಕಾಳಿ ಮೇಕಪ್ನಲ್ಲಿದ್ದರೆ ಮೇಕಪ್ ತೆಗೆದು ಬನ್ನಿ ಎನ್ನುತ್ತಿದ್ದೆ. ‘ಆಪ್ತಮಿತ್ರ’ ಸಮಯದಲ್ಲಿ ಸೌಂದರ್ಯಾಗೂ ನಾನು ಹಾಗೇ ಹೇಳುತ್ತಿದ್ದೆ. ನಾಗವಲ್ಲಿ ರೀತಿಯ ಹೊಳಪು ನನಗೆ ರಾಧಿಕಾ ಕಣ್ಣಲ್ಲೂ ಕಾಣಿಸಿತು ಎಂದರು. ‘ಭೈರಾದೇವಿ’ ಸಿನಿಮಾದಲ್ಲಿ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಪರಲೋಕದ ಜೀವಿಯೊಂದರಿಂದ ಸಮಸ್ಯೆಗೆ ಸಹ ತುತ್ತಾಗುತ್ತಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos