ನನಗೆ ತೀರಾ ಮೋಸ ಆಗಿದೆ: ಹಾಸ್ಟೆಲ್ ಹುಡುಗರ ಕಿರಿಕ್ ಬಗ್ಗೆ ವಿವರಣೆ ನೀಡಿದ ರಮ್ಯಾ

|

Updated on: Mar 06, 2025 | 8:41 PM

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ತಂಡದ ಜೊತೆ ರಮ್ಯಾ ಕಿರಿಕ್ ಮಾಡಿಕೊಂಡಿದ್ದಾರೆ. ಇಂದು (ಮಾರ್ಚ್​ 6) ಕೂಡ ಈ ಕೇಸ್​ಗೆ ಸಂಬಂಧಿಸಿಂತೆ ರಮ್ಯಾ ಅವರು ಕೋರ್ಟ್​ಗೆ ಬಂದಿದ್ದರು. ಬಳಿಕ ಅವರು ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಸಂವಾದದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಕೇಸ್​ ಕುರಿತು ಅವರು ಮಾತನಾಡಿದ್ದಾರೆ.

ನಟಿ ರಮ್ಯಾ (Ramya Divya Spandana) ಅವರು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ಜೊತೆಗಿನ ಕಿರಿಕ್ ಬಗ್ಗೆ ಮಾತನಾಡಿದ್ದಾರೆ. ‘ಒಪ್ಪಂದದ ಪ್ರಕಾರ ಅವರು ನಡೆದುಕೊಂಡಿಲ್ಲ. ಈ ರೀತಿ ಯಾರಿಗೂ ಆಗಬಾರದು. ನನಗೆ ನ್ಯಾಯ ಸಿಗತ್ತೆ ಎಂಬ ನಂಬಿಕೆ ಇದೆ. ಸ್ಟಾರ್​ ಆಗಿ ನಾನು ಹೊಸಬರ ಜೊತೆ ಹಣ ತೆಗೆದುಕೊಳ್ಳದೇ ಸಿನಿಮಾ ಮಾಡಿದ್ದೇನೆ. ಆದರೆ ಅವರು ಹೇಳಿದ್ದೇ ಬೇರೆ, ಮಾಡಿದ್ದೇ ಬೇರೆ. ಅದರಿಂದ ನನಗೆ ತುಂಬಾ ನಿರಾಸೆ ಆಯಿತು. ಅತಿಥಿ ಪಾತ್ರ ಅಂತ ಹಾಕಿಲ್ಲ. ನಾನೇ ಹೀರೋಯಿನ್ ಎಂಬ ರೀತಿ ಪೋಸ್ಟರ್ ಹಾಕಿದರು. ಅದರಿಂದ ನನ್ನ ಕಮ್​ಬ್ಯಾಕ್ ಸಿನಿಮಾಗೆ ತೊಂದರೆ ಆಗತ್ತೆ’ ಎಂದು ರಮ್ಯಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.