ನಟಿ ರಕ್ಷಿತಾ ಪ್ರೇಮ್ ಗೆ ಉಡುಗೊರೆಯಾಗಿ ಸೀರೆ ಕೊಟ್ಟ ಮೋಹಕ ತಾರೆ!

ಸಾಧು ಶ್ರೀನಾಥ್​
|

Updated on: Apr 24, 2021 | 5:19 PM

ಟಿಪ್ಪಣಿ ಮೂಲಕ ನಟಿ ರಮ್ಯಾ, ತಮ್ಮಿಬ್ಬರ ಒಡನಾಟದ ವರ್ಷಗಳಲ್ಲಿ ಎಲ್ಲಾ ಸುಂದರ ನೆನಪುಗಳಿಗೆ ಧನ್ಯವಾದ ಎಂದು ರಕ್ಷಿತಾಗೆ ಹೇಳಿದ್ದಾರೆ. ನೀವು ಈ ಸೀರೆಯನ್ನು ಇಷ್ಟಪಡುತ್ತೀರಿ ಮತ್ತು ಧರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಎಲ್ಲಾ ನೆನಪುಗಳಿಗೆ ಧನ್ಯವಾದಗಳು. ಮಚ್ ಲವ್ ರಮ್ಯಾ ಎಂದು ಬರೆದಿದ್ದಾರೆ.

ಒಂದು ಸುಂದರವಾದ ಉಡುಗೊರೆಯಿಲ್ಲದೆ ಯಾರ ಜನ್ಮದಿನವೂ ಪೂರ್ಣಗೊಳ್ಳುವುದಿಲ್ಲ. ಅದಕ್ಕೆ ಅನಿಸುತ್ತೆ ನಟಿ ರಾಜಕಾರಣಿ ರಮ್ಯಾ ತಮ್ಮ ದೀರ್ಘಕಾಲದ ಸ್ನೇಹಿತೆ ನಟಿ ರಕ್ಷಿತಾ ಪ್ರೇಮ್ ಅವರಿಗೆ ಒಂದು ಒಳ್ಳೆಯ ಉಡುಗೊರೆ ನೀಡಿದ್ದಾರೆ. ಈ ಹಿಂದೆ ನಟಿ ರಕ್ಷಿತಾ ಪ್ರೇಮ್‌ಗೆ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದ ನಟಿ ರಮ್ಯಾ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಬದಲಿಗೆ ತಮ್ಮ ಆತ್ಮೀಯ ಗೆಳತಿಗೆ ಕೈಯಿಂದ ಬರೆದ ಟಿಪ್ಪಣಿಯೊಂದಿಗೆ ಒಂದು ಉಡುಗೊರೆಯನ್ನು ಕಳುಹಿಸಿದ್ದಾರೆ.

ಟಿಪ್ಪಣಿ ಮೂಲಕ ನಟಿ ರಮ್ಯಾ, ತಮ್ಮಿಬ್ಬರ ಒಡನಾಟದ ವರ್ಷಗಳಲ್ಲಿ ಎಲ್ಲಾ ಸುಂದರ ನೆನಪುಗಳಿಗೆ ಧನ್ಯವಾದ ಎಂದು ರಕ್ಷಿತಾಗೆ ಹೇಳಿದ್ದಾರೆ. ನೀವು ಈ ಸೀರೆಯನ್ನು ಇಷ್ಟಪಡುತ್ತೀರಿ ಮತ್ತು ಧರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಎಲ್ಲಾ ನೆನಪುಗಳಿಗೆ ಧನ್ಯವಾದಗಳು. ಮಚ್ ಲವ್ ರಮ್ಯಾ ಎಂದು ಬರೆದಿದ್ದಾರೆ. ಇನ್ನೂ ಈ ಉಡುಗೊರೆ ಮತ್ತು ಟಿಪ್ಪಣಿಗೆ ನಟಿ ರಕ್ಷಿತಾ ಖುಷಿಯಾಗಿ ನಟಿ ರಮ್ಯಗೆ ಧನ್ಯವಾದಗಳು ತಿಳಿಸಿದ್ದಾರೆ.
(Ramya Gifts Saree To Her Bestie Rakshitha On Her Birthday)