‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ಸೂಪರ್ ಹಿಟ್ ಆಗಿದೆ. ಚಿತ್ರದ ಸಕ್ಸಸ್ ಮೀಟ್ ವೇಳೆ ರಂಗಾಯಣ ರಘು ಅವರು ಚಿತ್ರದ ನಾಯಕಿಯರಿಗೆ ಒಂದು ಸಂಕಲ್ಪ ಮಾಡಿಸಿದರು. ಬೇರೆ ಯಾವುದೇ ಭಾಷೆಯಲ್ಲಿ ಬೇಡಿಕೆ ಬಂದರೂ ಕನ್ನಡವನ್ನು ಮರೆಯುವುದಿಲ್ಲ ಎಂದು ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಅವರಿಂದ ಸಂಕಲ್ಪ ಮಾಡಿಸಲಾಯಿತು.
ರಂಗಾಯಣ ರಘು, ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಅವರು ನಟಿಸಿದ ‘ಪ್ರೇಮದ ಊರಲಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಚಿತ್ರದ ಸಕ್ಸಸ್ ಮೀಟ್ ವೇಳೆ ರಂಗಾಯಣ ರಘು ಅವರು ಚಿತ್ರದ ನಾಯಕಿಯರಿಗೆ ಒಂದು ಸಂಕಲ್ಪ ಮಾಡಿಸಿದರು. ಬೇರೆ ಯಾವುದೇ ಭಾಷೆಯಲ್ಲಿ ಬೇಡಿಕೆ ಬಂದರೂ ಕನ್ನಡವನ್ನು ಮರೆಯುವುದಿಲ್ಲ ಎಂದು ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಅವರಿಂದ ಸಂಕಲ್ಪ ಮಾಡಿಸಲಾಯಿತು. ‘ನೀವು ಕೊಡಗಿನವರಲ್ಲವೇ.. ಹಾಗಾಗಿ ಮೊದಲೇ ಭಾಷೆ ತೆಗೆದುಕೊಂಡೆ’ ಎಂದು ರಂಗಾಯಣ ರಘು ನಗುವಿನ ಚಟಾಕಿ ಹಾರಿಸಿದರು. ಮುಂಗಾರು ಮಳೆ, ದುನಿಯಾ, ಗಾಳಿಪಟ ರೀತಿಯಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಗೆದ್ದಿದೆ ಎಂದು ರಂಗಾಯಣ ರಘು ಅವರು ಸಂತೋಷ ವ್ಯಕ್ತಪಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
