ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ಮುಖ್ಯಾಂಶಗಳು
- ಸೂಳೆಕರೆಯಲ್ಲಿ ಕಾಣಿಸಿಕೊಂಡ ನೀರುನಾಯಿ
- ವಾಕಿಂಗ್ ಹೋದ ವ್ಯಕ್ತಿಯ ಮೊಬೈಲ್ನಲ್ಲಿ ಸೆರೆ ಸಿಕ್ಕ ನೀರುನಾಯಿ
- ಬೇಟೆ ಅರಸಿ ದಡಕ್ಕೆ ಬಂದಿದ್ದ ನೀರುನಾಯಿ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ ಸೂಳೆಕೆರೆಯಲ್ಲಿ ಅಪರೂಪದ ನೀರುನಾಯಿಗಳು ಪತ್ತೆಯಾಗಿವೆ. ಬೆಳಗಿನ ವಾಕಿಂಗ್ ವೇಳೆ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸುಮಾರು 5-6 ನೀರುನಾಯಿಗಳು ಆಹಾರ ಅರಸಿ ದಡಕ್ಕೆ ಬಂದಿದ್ದವು. ಇದು ರಾಜ್ಯ ವನ್ಯಜೀವಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ದಾವಣಗೆರೆ, ನವೆಂಬರ್ 12: ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಏಷ್ಯಾದ ಅತೀದೊಡ್ಡ ಎರಡನೇ ಕೆರೆಯಾದ ಸೂಳೆಕೆರೆ ಕೆರೆಯಲ್ಲಿ ಅಪರೂಪದ ನೀರುನಾಯಿಗಳು ಪ್ರತ್ಯಕ್ಷವಾಗಿವೆ. ಇಂದು ಬೆಳಗ್ಗೆ ಓರ್ವ ವ್ಯಕ್ತಿ ವಾಕಿಂಗ್ಗೆ ಹೋಗಿದ್ದಾಗ ತೀರಾ ಅಪರೂಪದ ಪ್ರಭೇದ ಸುಮಾರು 5-6 ನೀರು ನಾಯಿಗಳು ಕಂಡುಬಂದಿವೆ. ಬೇಟೆ ಅರಸಿ ದಡಕ್ಕೆ ಬಂದಿದ್ದ ನೀರು ನಾಯಿಗಳ ವಿಡಿಯೋವನ್ನು ಅವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
