ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ

Updated on: Feb 19, 2026 | 8:40 PM

ರಶ್ಮಿಕಾ ಮಂದಣ್ಣ ಅವರ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ಯಲ್ಲಿ ಪ್ರಮೋದ್ ಶೆಟ್ಟಿ ಕೂಡ ನಟಿಸಿದ್ದರು. ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ಮದುವೆ ಆಗುತ್ತಿದ್ದಾರೆ. ತಮಗೆ ಮದುವೆಯ ಆಹ್ವಾನ ಬಂದಿಲ್ಲ ಎಂದು ಪ್ರಮೋದ್ ಶೆಟ್ಟಿ ಅವರು ಹೇಳಿದ್ದಾರೆ. ಈ ವಿಡಿಯೋದಲ್ಲಿ ಇದೆ ವಿವರ..

‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ ಆಗಿದ್ದರು. ಆ ಚಿತ್ರದಲ್ಲಿ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಕೂಡ ಕೆಲಸ ಮಾಡಿದ್ದಾರೆ. ಈಗ ಒಟ್ಟಾರೆ ಶೆಟ್ಟಿ ಗ್ಯಾಂಗ್​​ನಿಂದ ರಶ್ಮಿಕಾ ಮಂದಣ್ಣ ಅವರು ದೂರ ಉಳಿದುಕೊಂಡಿದ್ದಾರೆ. ಈಗ ಅವರು ವಿಜಯ್ ದೇವರಕೊಂಡ (Vijay Deverakonda) ಜೊತೆ ಮದುವೆ ಆಗಲು ಸಜ್ಜಾಗಿದ್ದಾರೆ. ಆದರೆ ಶೆಟ್ಟಿ ಗ್ಯಾಂಗ್ ಸದಸ್ಯರಿಗೆ ಮದುವೆಯ ಆಹ್ವಾನ ಬಂದಿಲ್ಲ. ತಮಗೆ ಆಹ್ವಾನ ಬಂದಿಲ್ಲ, ಬರೋದೂ ಇಲ್ಲ ಎಂದು ಪ್ರಮೋದ್ ಶೆಟ್ಟಿ (Pramod Shetty) ಅವರು ಹೇಳಿದ್ದಾರೆ. ಯಾಕೆ ಅಂತ ಕೇಳಿದ್ದರೆ, ‘ಅದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ. ಒಂದು ವೇಳೆ ಆಹ್ವಾನ ಬಂದರೆ ಹೋಗುವುದಾಗಿ ಅವರು ತಿಳಿಸಿದ್ದಾರೆ. ಆ ಬಗ್ಗೆ ಪೂರ್ತಿ ಮಾಹಿತಿ ಈ ವಿಡಿಯೋದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More