Ravichandran: ಮಗಳ ಮದುವೆಗೆ ಸಹಾಯ ಮಾಡಿದ ಮೂವರು ಸ್ನೇಹಿತರ ಬಗ್ಗೆ ವೇದಿಕೆಯಲ್ಲಿ ರವಿಚಂದ್ರನ್​ ಓಪನ್​ ಮಾತು

| Updated By: ಮದನ್​ ಕುಮಾರ್​

Updated on: Aug 09, 2022 | 9:50 AM

Ravi Bopanna: ‘ಇಂಥ ಸ್ನೇಹಿತರು ಸಿಗೋದಕ್ಕೆ ಪುಣ್ಯ ಮಾಡಿರಬೇಕು’ ಎಂದು ರವಿಚಂದ್ರನ್​ ಹೇಳಿದ್ದಾರೆ. ‘ರವಿ ಬೋಪಣ್ಣ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಒಂದಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ನಟ ರವಿಚಂದ್ರನ್​ (Ravichandran) ಅವರು 2019ರ ಮೇ ತಿಂಗಳಲ್ಲಿ ಪುತ್ರಿ ಗೀತಾಂಜಲಿ (Ravichandran Daughter) ಮದುವೆಯನ್ನು ಅದ್ದೂರಿಯಾಗಿ ಮಾಡಿದರು. ಹಲವರಿಗೆ ತಿಳಿದಿರದ ಸಂಗತಿ ಏನೆಂದರೆ ಆ ಸಂದರ್ಭದಲ್ಲಿ ಅವರಿಗೆ ಹಣ ಕೊರತೆ ಉಂಟಾಗಿತ್ತು. ಆಗ ಸಹಾಯಕ್ಕೆ ಬಂದಿದ್ದೇ ಸ್ನೇಹಿತರು. ಆ ಘಟನೆಯನ್ನು ರವಿಚಂದ್ರನ್​ ಈಗ ನೆನಪಿಸಿಕೊಂಡಿದ್ದಾರೆ. ‘ರವಿ ಬೋಪಣ್ಣ’ (Ravi Bopanna) ಸಿನಿಮಾ ಆಗಸ್ಟ್​ 12ರಂದು ರಿಲೀಸ್​ ಆಗುತ್ತಿದೆ. ಅದರ ಸಲುವಾಗಿ ಸೋಮವಾರ (ಆಗಸ್ಟ್​ 8) ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರವಿಚಂದ್ರನ್​ ಮಾತನಾಡಿದರು. ‘ನನ್ನ ಮಗಳ ಮದುವೆ ಸಮಯದಲ್ಲಿ ಚಿತ್ರರಂಗದ ಹೊರಗಿನ ಸ್ನೇಹಿತರು ಸಹಾಯ ಮಾಡಿದರು. ರಮೇಶ್​, ವೆಂಕಟೇಶ್​ ಸಾಕಷ್ಟು ಹಣ ನೀಡಿ ನನ್ನ ಬೆಂಬಲಕ್ಕೆ ನಿಂತರು. ಮತ್ತೋರ್ವ ಸ್ನೇಹಿತ ಸಜ್ಜನ್​ ಅವರು ಆಭರಣ ಖರೀದಿಗೆ ಸಹಾಯ ಮಾಡಿದರು’ ಎಂದು ಸ್ನೇಹಿತರ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ ಕ್ರೇಜಿ ಸ್ಟಾರ್​.

Published on: Aug 09, 2022 09:49 AM